ಬಾಗಲಕೋಟೆ:ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಪ್ರಚಾರ ಪ್ರಿಯ ಜನಪ್ರತಿನಿಧಿಗಳಲ್ಲಿ ಬಹುತೇಕರು ತಮ್ಮ ಬಾಯಿಚಪಲದ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಪ್ರಚಾರಕ್ಕೆ ಬಂದವರೆಂದರೆ ಖಂಡಿತವಾಗಿಯೂ ತಪ್ಪು ಆಗಲಾರದು.
ಈ ಉತ್ತರ ಕರ್ನಾಟಕದ ಹಲವು ಭಾಗಗಳ ಜನಪ್ರತಿನಿಧಿಗಳು ತಮ್ಮ ಜನಪರ ಕೆಲಸಗಳ ಮುಖಾಂತರ ಪ್ರಚಾರಕ್ಕೆ ಬಂದವರಲ್ಲಿ ಬಹಳ ವಿರಳವೆಂದೇ ಹೇಳಬೇಕಾಗುತ್ತದೆ. ಉತ್ತರ ಕರ್ನಾಟಕದ ಭಾಗಗಳಲ್ಲಿಯ ಹಲವಾರು ಗ್ರಾಮಗಳಲ್ಲಿ ಈ ಆಧುನಿಕ ಕಾಲಘಟ್ಟದಲ್ಲೂ ಆದಿಮಾನವರಂತೆ ಬದುಕುತ್ತಿರುವ ಗ್ರಾಮಗಳಿವೆ.ಕುಡಿಯಲು ಶುದ್ಧ ನೀರು,ಚರಂಡಿ,ರಸ್ತೆ,ವಿದ್ಯುತ್, ಆಸ್ಪತ್ರೆ, ಶಾಲೆಗಳೂ ಸೇರಿದಂತೆ ಹಲವಾರು ಮೂಲಭೂತ ಅಗತ್ಯ ಸೌಲಭ್ಯಗಳಿಂದ ವಂಚಿತವಾದ ಗ್ರಾಮಗಳನ್ನು ಈ ಭಾಗಗಳಲ್ಲಿ ಕಾಣಬಹುದು.
ಜಿಲ್ಲಾ ಮಟ್ಟದ ಅಧಿಕಾರಿಗಳಂತೂ ಏ.ಸಿ.ರೂಮಿನಿಂದ ಹೊರಬಂದು ಪ್ರತ್ಯಕ್ಷ ಗ್ರಾಮ ವೀಕ್ಷಣೆ ಮಾಡಿರುವ ಉಧಾಹರಣೆಗಳು ಬಹಳ ಕಡಿಮೆ.
ಇಂದವಾರ ಗ್ರಾಮವು ಹುನಗುಂದ ತಾಲೂಕಿನ ಗಡಿ ಗ್ರಾಮ.ಅಲ್ಲಿಂದ ಮುಂದೆ ಬೇರೆ ಹೋಗಲು ರಸ್ತೆ ಸಂಪರ್ಕವಿಲ್ಲಾ.ನಾರಾಯಣಪುರ ಆಣೆಕಟ್ಟೆಯ ಹಿನ್ನೀರಿನಿಂದ ಮೊದಲಿದ್ದ ರಸ್ತೆಗಳೆಲ್ಲವೂ ಬಂದ ಆಗಿ ಹೋಗಿವೆ.ಹೀಗಾಗಿ ಯಾವುದೇ ಅಧಿಕಾರಿಯು ಈ ಗ್ರಾಮದತ್ತ ಸುಳಿಯುವುದೇ ಇಲ್ಲಾ.
ಇಲ್ಲಿಯ ಗ್ರಾಮಸ್ತರು ತೊಂಭತ್ತೊಂಭತ್ತು ಭಾಗ ರೈತರು.ಮುಗ್ದರು ಅಧಿಕಾರಿಗಳಬಳಿಹೂಗಿ ತಮ್ಮ ಸಮಸ್ಯೆ ಗಳನ್ನು ಗಟ್ಟಿ ಧ್ವನಿಯಲ್ಲಿ ಹೇಳಲಾಗದಷ್ಟು ನಿಶಕ್ತರು.ಇವರು ಸೌಮ್ಯಸ್ವಭಾವದಿಂದ ಹತ್ತಾರುಬಾರಿ ಹೇಳಿದರೂ ಸಹ ಅಧಿಕಾರಿ ಜನಪ್ರತಿನಿಧಿಗಳ ಗಟ್ಟಿಚರ್ಮದ ಕಿವಿ ಪದರಿಗೆ ತಲುಪುವುದೇ ಇಲ್ಲಾ.ಒಬ್ಬಿರು ಅಕಸ್ಮಾತ್ ಸ್ವಲ್ಪ ಗಟ್ಟಿಯಾಗಿ ಮಾತಾಡಿದರೆ ಮುಗಿತು ಒಂದು ವಾರದೊಳಗೆ ಅವನಿಗೆ ಗ್ರಚಾರ ಕಾದಿದೆಯಂತ.ಇದಕ್ಕೆ ಉಧಾಹರಣೆ ಮುಂದೆ ಇದೆ ಇದೆ ಜಿಲ್ಲೆಯಲ್ಲಿ ರೈತ ಹೋರಾಟಗಾರ ಎಲ್ಲಪ್ಪ ಹೆಗಡೆ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಂತ ಘಟನೆಗಳೇ ಸಾಕ್ಷಿ.ಇಂಥಾ ವಾತಾವರಣ ಬಹುತೇಕ ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಇವೆ ಅದರಿಂದ ಸಾರ್ವಜನಿಕರು ಧ್ವನಿಎತ್ತಲು ಹೆದರಿಕೆ ಪಡುತ್ತಾರೆ.
ಈಗ ಪ್ರಮುಖ ವಿಷಯ ಅಂದರೆ ಇಂದವಾರ ಗ್ರಾಮವು ನಾರಾಯಣ ಪುರ ಆಣೆಕಟ್ಟೆಯಲ್ಲಿ ಮುಳುಗಡೆಯಾಗಿಹೋಗಿದೆ ಸುಮಾರು ನಲವತ್ತು ವರ್ಷಗಳಹಿಂದೆ ಇಂದವಾರ ಪುನರ್ ವಸತಿ ಕೇಂದ್ರ ಮಾಡಿದಾಗ ಖಾಟಾಚಾರಕ್ಕೆ ಎಂಬಂತೆ ಕೊಡಬೇಕಾದ ಮೂಲಸೌಲಭ್ಯಗಳ ಅಡಿಲ್ಲಿ ಕೆಲವು ಕಟ್ಟಡ ಗಳನ್ನು ಕಟ್ಟಿ ಕೈ ತೊಳೆದು ಕೊಂಡ ಎಲ್ಲಾ ಆಡಳಿತಾರೂಢ ಸರ್ಕಾರಗಳು ಇತ್ತ ಕಡೆ ತಿರುಗಿಯೂ ನೋಡಿಲ್ಲಾ.ಶಾಲಾ ಕಟ್ಟಡ,ದೇವಸ್ಥಾನ, ಕುಡಿಯುವ ನೀರಿನ ಘಟಕಗಳು ಅವುಗಳೆಲ್ಲವೂ ಅವಸಾನದ ಅಂತ ತಲುಪಿವೆ.ಅವುಗಳ ಕುರಿತು ಸರ್ಕಾರದ ಸಂಬಳ ತಿನ್ನುವಷ್ಟಕ್ಕಾದರೂ ಅಧಿಕಾರಿಗಳು ನೋಡ್ತಿಲ್ಲಾ.ಜನಸೇವೆಯೇ ಜನಾರ್ಧನ ಸೇವೆಎಂದು ಬೊಬ್ಬೆಹಾಕುವ ಜನಪ್ರತಿನಿಧಿಗಳಿಗೂ ಇವು ಕಾಣ್ತಿಲ್ಲಾ.ಬರಿ ವಿವಾದಾತ್ಮಕ ಚಟುವಟಿಕೆ,ಮಾತುಗಳಿಂದ ವಿಜೃಂಭಿಸುವತ್ತ ವಲವು ಕೆಲಸದ ಕಡೆ ಇರಲಾರದು. ನೋಡಿ ಈ ಗ್ರಾಮದ ಶಾಲಾ ಕಟ್ಟಡದ ಅವಸ್ತೆಯನ್ನು ಇವರ ಮಕ್ಕಳನ್ನು ಇಂಥಾ ಶಾಲಾ ಕಟ್ಟಡದಲ್ಲಿ ಕೂಡಿಸುತ್ತಾರಾ ಇವರು ಜನಸೇವಕರು ಹಾಗೂ ಸರ್ಕಾರಿ ನೌಕರರು?(ಈ ಮನವಿಗಳಿಗೆ ಬೆಲೆನೇ ಇಲ್ವೆ)
ಶಿಕ್ಷಣ ಬಹಳ ಮುಖ್ಯವಾದ ಅತ್ಯಗತ್ಯವಾಗಿ ಎಲ್ಲರಿಗೂ ಶಿಕ್ಷಣ ಕೊಡಬೇಕಾದ ಜವಾಬ್ದಾರಿ ಸರ್ಕಾರಕ್ಕಿದೆ.ಕೇವಲ ಒಣ ಭಾಷಣಗಳಿಂದ ಸಾಧಿಸಲು ಸಾಧ್ಯವಿಲ್ಲಾ ಕಾರ್ಯಗತಮಾಡಿತೋರಿಸಬೇಕು.ಸರ್ಕಾರ ಶಿಕ್ಷಣ ಹೆಸರಲ್ಲಿ ಕೋಟಿಕೋಟಿ ಹಣ ಖರ್ಚು ಮಾಡ್ತಿದೆ ನಿಜ ಆದರೆ ಅದು ಎಲ್ಲಿ ಹೇಗೆ ಬಳಕೆ ಮಾಡಬೇಕೆಂಬ ಪರಿ ಜ್ಞಾನವೂ ಅಷ್ಟೇ ಇರಬೇಕಾಗ್ತದೆ.ಈಗ ಇಷ್ಟೇ ಸಾಕು ಶಾಸಕ ವಿಜಯಾನಂದ ಕಾಶಪ್ಪನವರ್,ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ,ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಇಂಥ ಸಮಸ್ಯಗಳನ್ನು ಕೂಡಲೇ ನಿಭಾಯಿಸಬೇಕು.ಇಲ್ಲದಿದ್ದರೆ ಅಡಕೆಗೆ ಹೋದ ಮಾನದಂತಾಗಬಾರದೆಂಬ ಉದ್ದೇಶವಷ್ಟೆ.ಸಂಬಂದಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಿ.