ದಾವಣಗೆರೆ”ಪತ್ರಕರ್ತರ ಮಕ್ಕಳಿಗೆ ಉಚಿತ ಐಎಎಸ್‌ ತರಬೇತಿ ಘೋಷಿಸಿದ” ವಿನಯ್ ಕುಮಾರ್ ಜಿ.ಬಿ ಇನ್ಸೈಟ್ಸ್ ಐಎಎಸ್‌ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರು.

ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನ ತಿದ್ದಿ ತೀಡುವ ಮೂಲಕ ಮೂಲಭೂತ ಹಕ್ಕು,ಅಗತ್ಯ ಸೌಲಭ್ಯ ಸೌಕರ್ಯ ಹಾಗೂ ಅಭಿವೃದ್ಧಿಗಳ ಬಗ್ಗೆ ಆಡಳಿತ ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸುವವರು.

ಆದರೆ ತಮ್ಮ ವೈಯಕ್ತಿಕ ಕುಟುಂಬದ ಕುಂದು ಕೊರತೆಗಳ ಬಗ್ಗೆ ಹೆಚ್ಚು ಗಮನ ಹರಿಸಲು ಹಾಗೂ ಅಗತ್ಯೆಗಳ ಈಡೇರಿಸಲು ಎಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ,

ಪತ್ರಕರ್ತರ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಅವರ ಮಕ್ಕಳು ಹಾಗೂ ಕುಟುಂಬದವರಿಗೆ ನಮ್ಮ ದೇಶದ ಮೂರನೇ ಸ್ಥಾನದಲ್ಲಿರುವ ಪ್ರತಿಷ್ಠಿತ ಇನ್ಸೈಟ್ಸ್ ಐಎಎಸ್‌ ತರಬೇತಿ ಸಂಸ್ಥೆಯ ಸಂಸ್ಥಾಪಕ ಉಚಿತವಾಗಿ ಕೋಚಿಂಗ ನೀಡುವದಾಗಿ,

ದಾವಣಗೆರೆಯ ಮುಂದಿನ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿರುವ ಜಿ.ಬಿ‌ ವಿನಯ್ ಕುಮಾರ್ ಕಕ್ಕರಗೊಳ್ಳ ರವರು ಘೋಷಣೆ ಮಾಡಿದರು.

ದಾವಣಗೆರೆಯ ಕನ್ನಡ ಭವನದಲ್ಲಿ ಜಿಲ್ಲಾ ವರದಿಗಾರರ ಕೂಟ ದಿಂದ ಹಮ್ಮಿಕೊಳ್ಳಲಾಗಿದ್ದ ‘ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಎಸ್.ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಜಿಲ್ಲಾ ವರದಿಗಾರ ಕೂಟದ ಅಧ್ಯಕ್ಷತೆ ವಹಿಸಿದ್ದ ಏಕಾಂತಪ್ಪ ರವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಸಲಹೆಗಾರ ಪ್ರಭಾಕರ್, ರಾಜ್ಯ ಪತ್ರಕರ್ತ ಸಂಘದ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ವರದಿಗಾರ ಕೂಟದ ಪ್ರಧಾನ ಕಾರ್ಯದರ್ಶಿ ಡಾ.ವರದರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಏ.ಮೊ.ಮಂಜುನಾಥ್.ಇನ್ನಿತತರರು ಶ್ರೀ ಬಸವಪ್ರಭು ಸ್ವಾಮಿ ಗಳು ಸಾನಿಧ್ಯ ವಹಿಸಿದ್ದರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಅಭಿನಂದಿಸಿ ಕೇಂದ್ರ ನಾಗರಿಕ ಸೇವಾ ಆಯೋಗವು ನಡೆಸುವ ಐಎಎಸ್‌ ಪರೀಕ್ಷೆಯ ತಯಾರಿಗೆ ಸಮಸ್ತ ದಾವಣಗೆರೆ ಜಿಲ್ಲೆಯ ಪತ್ರಕರ್ತರ ಮಕ್ಕಳಿಗೆ ಉಚಿತವಾಗಿ ಐಎಎಸ್‌ ತರಬೇತಿ ನೀಡುವ ಭರವಸೆಯನ್ನ ವ್ಯಕ್ತಪಡಿಸಿದರು.
ವೇದಿಕೆಯಲ್ಲಿದ್ದ ಅಧ್ಯಕ್ಷ ಏಕಾಂತಪ್ಪ ನವರು ಸಧ್ಯದಲ್ಲೇ ಇನ್ ಸೈಟ್ಸ್ ವಿನಯ್ ರವರ ಜೊತೆ ಪತ್ರಕರ್ತರ ಸಂವಾದ ಹಮ್ಮಿಕೊಳ್ಳುವ ಬಗ್ಗೆ ಪ್ರಕಟಿಸಿ
ಐಎಎಸ್ ಕೋಚಿಂಗ್ ಎಲ್ಲರಿಗೂ ಎಟುಕುವಂತಹದ್ದಲ್ಲ
ಇಂತಹ ಸಂದರ್ಭದಲ್ಲಿ ಇನ್ಸ್ ಸೈಟ್ಸ್ ವಿನಯ್ ರವರ ಶೈಕ್ಷಣಿಕ ಸಾಮಾಜಿಕ ಕಳಕಳಿ ಮಾನವೀಯತೆ ಬಗ್ಗೆ ಶ್ಲಾಘನೀಯ ಕಾರ್ಯ ಎಂದರು.

LEAVE A REPLY

Please enter your comment!
Please enter your name here