ವಿಜಯಪುರ: ನಾನು ಈ ಮೂರ್ನಾಲ್ಕು ದಿವಸಗಳ ಮುಂಚೆ ವಿಜಯಪುರ ತಾಲೂಕ್ ಬಬಲೇಶ್ವರ್ ವಿಧಾನಸಭೆವ್ಯಾಪ್ತಿಯ ಹೊನಗನಹಳ್ಳಿ ಮತ್ತು ಸವನಹಳ್ಳಿಗ್ರಾಮಕ್ಕೆ ನಮ್ಮ ಕುಟುಂಬದ ಕಾರ್ಯನಿಮಿತ್ತ ಹೋಗಿದ್ದೆ.
ಹಾಗೇ ಗ್ರಾಮದ ರೈತರು ರೈತಕಾರ್ಮಿಕರು,ಹಾಗೂ ಇತರೆ ಗ್ರಾಮದ ಬಹುತೇಕ ಎಲ್ಲರೊಂದಿಗೆ ಸ್ವಾಭಾವಿಕವಾಗಿ ಮಳೆ,ಬೆಳೆ,ಮುಂತಾದ ಕಷ್ಟಸುಖಗಳಕುರಿತು ಸಹಜ ಯೋಗಕ್ಷೇಮ ವಿಚಾರಿಸುವಾಗ ನನ್ನ ಗಮನಕ್ಕೆ ಬಂದವಿಷಯಗಳುಮಾತ್ರ ಯಾರೊಬ್ಬರೂ ನೆಮ್ಮದಿಯ ಬದುಕು ನಡೆಸುವುದು ಸಾಧ್ಯವಾಗುತ್ತಿಲ್ಲಾ ಎಂಬುದು ಙಗೆ ಸ್ಪಸ್ಟವಾಯಿತು.ಅವುಗಳಲ್ಲಿ ಪ್ರಮುಖವಾದವುಗಳೆಂದರೆ ೧),ರೈತರಿಗೆ ಮುಂಗಾರು ಕೈಕೊಟ್ಟ್ಇದ್ದು ಇತ್ತೀಚೆಗೆ ಸುರಿದ ಮಳೆಯಿಂದ ಸ್ವಲ್ಪ ಖುಷಿಯಾಗಿ ತೊಗರಿ,ಈರುಳ್ಳಿ,ಮುಂತಾದ ಕೆಲವು ಬೆಳೆಗಳನ್ನು ಬೆಳೆ ಸ್ವಲ್ಪಮಟ್ಟಿಗೆ ಇವೆ.೨),ಯಾವುದಾದರೂ ಸಹಾಯಬಯಸಿ ರಾಜಕಾರಣಿಗಳಬಳಿಹೋದರೆ ಏನ್ರಿ ನಿಮ್ಮೂರಲ್ಲಿ ನಮಗೆ ಮತ ಕಡಿಮೆ ಬಿದ್ದಿವೆ ನೀವುಕೆಲಸಮಾಡಿಲ್ಲಾ ಹೋಗ್ರಿ ಅಂತಾ ಗದರಿಸುವುದು.ಇದನ್ನು ರೈತರು ಸಹಿಸಿ ಕೊಳ್ಳುವುದು ಅನಿವಾರ್ಯ.
೩),ಗ್ರಾಮಗಳಲ್ಲಿ ಸಾಮರಸ್ಯ ಹಾಳಾಗಿಹೋಗಿದೆ .ಸ್ನೇಹಸಂಭಂದ ಬಾಂಧವ್ಯಗಳಿಗೆ ಬೆಲೆಯೇಇಲ್ಲಾ.೩),ಗ್ರಾಮಗಳಿಗೆ ಯಾವುದೇ ವಿಶೇಷಾನುದಾನಗಳು ಲಭ್ಯಗಳಿಲ್ಲಾ,೪),ಆಸ್ಪತ್ರೆ,ಲೈಬ್ರರಿ,ಪೋಸ್ಟ ಯಾವೂ ಮೇಲ್ದರ್ಜೆಗೆ ಇಲ್ಲಾ.ಇದ್ದವೂಗಳು ಸಹ ಸರಿಯಾಗಿಕಾರ್ಯ ನಿರ್ವಹಿಸಲಾಗುವುದಿಲ್ಲಾ ಕಾರಣ ಕೆಲಸದೊತ್ತಡ ಹೆಚ್ಚಾಗಿದೆ ಅದಕ್ಕೆತಕ್ಕಹಾಗೆ ಮೇಲ್ದರ್ಜೆಗೇರಿಸಿ ಸಿಬ್ಬಂದಿ ಹೆಚ್ಚಿಸಿಲ್ಲಾ.೫),ವಿದ್ಯುತ್, ನೀರು ಅಭಾವಗಳು ಇನ್ನೂ ಸಮರ್ಪಕವಾದ ಮೂಲಸೌಲಭ್ಯಗಳಿಲ್ಲಾ.೬),ಸಾರಿಗೆ ಸಂಪರ್ಕ ಯತೇಚ್ಯವಾಗಿದ್ದರೂ ಪ್ರಯಾಣಿಕರ ಬಳಕೆಗೆ ಉಪಯೋಗವಿಲ್ಲಾ ಸಮುದ್ರಕ್ಕೆ ನೆಂಟಸ್ತಿಕೆ ಉಪ್ಪಿಗೆ ಬಡತನ ಎನ್ನುವಹಾಗೆ.೭),ಕಳ್ಳರ ಹಾವಳಿ ಹೆಚ್ಚಾಗಿದೆ ರೈತರು ಜಮೀನುಗಳಲ್ಲಿಯ ಬೋರ್ ವೆಲ್ಲಗಳಿಗೆ ಅಳವಡಿಸಿದ ಕೇಬಲ್ ಗಳನ್ನು ಕಳ್ಳರು ಕದಿಯುತ್ತಿರುವುದು ಗಂಭೀರವಾದ ಸಮಸ್ಯೆಯಾಗಿದ್ದರೂ ಪೊಲೀಸ್ ಇಲಾಖೆಯ ನಿರ್ಲಕ್ಷಧೋರಣೆಯ ಕುರಿತು ಹಲವಾರು ರೈತರು ಅಸಮಾಧಾನ ವ್ಯಕ್ತಪಡಿಸಿದರು.೮),ಇನ್ನೂ ಮುಖ್ಯವೆಂದರೆ ಪೂರ್ವಿಕರಿಂದ ಪರಸ್ಪರ ಹೊಂದಾಣಿಕೆಯಿಂದ ಜಮೀನುಗಳಿಗೆ ಹೋಗಿಬರುವ ರೈತರ ಬಾಂಧವ್ಯಕ್ಕೆ ಕೊಳಕು ರಾಜಕೀಯದ್ವೇಶಗಳಿಂದ ಕೆಲವು ರಸ್ತೆಗಳು ಬಂದ ಆಗಿವೆ .ಇಂಥಾ ಅನೇಕ ಸಮಸ್ಯೆಗಳನ್ನು ಗ್ರಾಮೀನಭಾಗದ ರೈತವರ್ಗ ಅನುಭವಿಸುತ್ತಿರುವುದನ್ನು ಕೇಳಿ ಬಹಳ ಬೇಜಾರೆನಿಸಿತು.ಈ ಕೊಳಕುಮನಸ್ಸಿನ ರಾಜಕಾರಣಿಗಳಿಗೆ ಸಮಸ್ಯೆ ಗಳನ್ನು ಹೇಳಿಕೊಳ್ಳಲು ಹೋದರೆ ಅವರನ್ನು ತಮ್ಮ ವೈರಿಗಳೆಂಬಂತೆ ಪರಿಗನಿಸುವುದು ದುರದೃಷ್ಟ ಕರ ವಿಷಯ.

LEAVE A REPLY

Please enter your comment!
Please enter your name here