ದಾವಣಗೆರೆ ಆ.೧೬:ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ. ವಿಭಾಗದ ನಾಲೆಯಲ್ಲಿ ಮಳೆ ಕಡಿಮೆ
ಇರುವ ಕಾರಣ ನೀರು ನಿಲ್ಲಿಸಿ ಬೇಸಿಗೆ ಕಾಲದಲ್ಲಿ ಕೊಡಿ ಎಂದು ಕೆಲ ಅಡಿಕೆ ಬೆಳೆ ಬೆಳೆಯುವ ರೈತರು
ಮನವಿ ಮಾಡಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ
ತಾಲೂಕಿನ ಹಲವಾರು ಹಳ್ಳಿಯ ರೈತರಲ್ಲಿ ಆತಂಕ ಮೂಡಿಸಿದೆ ಆದರೆ ಯಾವುದೇ ರೀತಿಯ ಆತಂಕ ಬೇಡ
ಈಗಾಗಲೇ ಕಳೆದ ಆಗಸ್ಟ್ ೧೦ ರಂದು ಕಾಲುವೆಗೆ ನೀರು ಬಿಡಲಾಗಿದೆ ಭದ್ರಾ ಅಚ್ಚುಕಟ್ಟು ನೀರಾವರಿ ಯೋಜನೆ ನಿಗಮ ತೀರ್ಮಾನ ಕೈಗೊಂಡು
ಆದೇಶ ಕೂಡ ಹೊರಡಿಸಿದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ರೈತರು ಆತಂಕ ಬೇಡ ಯಾವುದೇ ಗಾಳಿ ಸುದ್ದಿ ಗಳಿಗೆ ಕಿವಿಗೊಡಬಾರದು ಎಂದು
ಭದ್ರಾ ಅಚ್ಚುಕಟ್ಟು ನೀರಾವರಿ ನಿಗಮ ಸದಸ್ಯ ಕಾರ್ಯದರ್ಶಿ ಸೀನಿಯರ್ ಎಂಜಿನಿಯರ್ ಸುಜಾತಾ ಎನ್ ಭರವಸೆ ನೀಡಿದರು.
ಆಗಸ್ಟ್ ೧೬ ರ ಇಂದು ಅವರನ್ನು ಭೇಟಿ ಯಾದ
ದಾವಣಗೆರೆ ಭಾಗದ ಲೋಕಿಕೆರೆ ಸೇರಿದಂತೆ ಹಲವು ರೈತರಗಳಿಗೆ ಸ್ಪಷ್ಟನೆ ನೀಡಿದ್ದಾರೆ
೧೦೦ ದಿನಗಳು ಪೂರ್ಣ ಅವಧಿ ವರೆಗೆ
ನಾಲೆಯಲ್ಲಿ ನೀರು ಬಿಡಲಾಗುವುದು ಆದೇಶವನ್ನು ಯಾವುದೇ ಕಾರಣಕ್ಕೂ ಬದಲಿಸಲಾಗದು,
ರೈತರು ಆತಂಕ ಬೇಡ ಈ ಅವಧಿಯೊಳಗೆ ಕೊಯ್ಲು
ಬರುವ ಅಲ್ಪಾವಧಿ ಬೆಳೆ ಬೆಳೆಯಲು ಅವಕಾಶ
ಇದೆ ಎಂದು ಸುಜಾತಾ ತಮ್ಮನ್ನು ಭೇಟಿ ಮಾಡಿದ ರೈತರಿಗೆ ಹೇಳಿದರು.
ವರದಿ; ಪುರಂದರ್ ಲೋಕಿಕೆರೆ.