ಮೂಡಲಗಿ: ಆ,14-ಪಟ್ಟಣದಲ್ಲಿ ಕೆಸರಿನಲ್ಲಿ ಅರಳಿದ ಕಮಲ ಲಕ್ಷ್ಮೀ ರಡೇರಟ್ಟಿ.

ಮಲ್ಲಪ್ಪ ಮತ್ತು ಗಿರಿಜಾ ಎಂಬ ಎಪ್ರಿಲ್,04-2003 ಎಂಬ ದಂಪತಿಗಳ ಮಗಳಾಗಿ ಮೂಡಲಗಿ ಯಲ್ಲಿ ಜನಿಸಿದ ಲಕ್ಷ್ಮೀ ಈಗ ಕ್ರೀಡೆಯಲ್ಲಿ ವಿಶ್ವ ಮಟ್ಟದಲ್ಲಿಯೇ ದೇಶದ ಮತ್ತು ತನ್ನ ಊರಿನ ಕೀರ್ತಿ ತಂದಿದ್ದಾಳೆ ಕುಮಾರಿ ಲಕ್ಷ್ಮೀ.

1 ರಿಂದ 4 ನೆಯ ತರಗತಿಯವರೆಗೆ ಬಿ.ವ್ಹಿ.ಸೋನವಾಲಕರ ಮೂಡಲಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ,ಆ್ಯಕ್ಸಸ್ಪಡ್ ಆಂಗ್ಲ ಮೀಡಿಯಂ ಬೈಲಹೊಂಗಲದಲ್ಲಿ 5 ರಿಂದ 6 ನೆಯ ತರಗತಿಯಲ್ಲಿ ಓದಿದ್ದಳು,7 ರಿಂದ 10 ನೆಯ ತರಗತಿ ಸಾಲಹಳ್ಳಿಯಲ್ಲಿ ವಿದ್ಯಾಭ್ಯಾಸ ಮತ್ತು 1 (ಪಸ್ಟ) ಪಿಯು ಮತ್ತು 2 ( ಸೆಕೆಂಡ್)ಪಿಯು ಬೆಳಗಾವಿ ಅಂಗಡಿ ಕಾಲೇಜನಲ್ಲಿ  ಓದು.

  ಹಂತ ಹಂತವಾಗಿ ಬೆಳೆದು ಈಗ ಆಗಷ್ಟ,13-2023 ರಂದು ಪಂಜಾಬಿನಲ್ಲಿ ನಡೆದ ನ್ಯಾಶನಲ್ ಪ್ಯಾರಾ ಓಪನ್ ಚಾಂಪಿಯನ್ಶಿಪ್ ನಲ್ಲಿ “ಬೆಳ್ಳಿ ಪದಕ”ಲಕ್ಷ್ಮೀ ಮಡಿಲಿಗೆ ಸೇರಿದೆ.

ನಾಶಿಕನಲ್ಲಿ ಮುಂದಿನ ತಿಂಗಳು ಸಪ್ಟೆಂಬರ್ 7 ಮತ್ತು 8, 2023 ರಂದು ನಡೆಯುವ  ಏಶಿನ್ ಪ್ಯಾರಾ ಓಪನ್ ಚಾಂಪಿಯನ್ ಗೆ ಆಯ್ಕೆ ಹಾಗೂ ಅದೆ ತಿಂಗಳು 22 ಸಪ್ಟೆಂಬರ್ ವರ್ಡ್ ಪ್ಯಾರಾ ಓಪನ್ ಚಾಂಪಿಯನ್ಷಿಪ್‌ ಗೆ ಆಯ್ಕೆ  ಆಗಿದ್ದಾಳೆ.                              ಕ್ಷೇತ್ರ ಶಿಕ್ಷಣಾಧಿಕಾರಗಳು ಅಜಿತ ಮನ್ನಿಕೇರಿ ತಂದೆ- ತಾಯಿಗಳು ಹಿಂತ ಮಗಳಿಗೆ ಜನ್ಮ ನೀಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಈ ಕುಮಾರಿಗೆ ತರಬೇತಿ ನೀಡಿದ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದರು. ಮೂಡಲಗಿ ಪಟ್ಟಣದ ಶಿಕ್ಷಕರು,ಸಂಘ ಸಂಸ್ಥೆಗಳು ಮತ್ತು ನಾಗರಿಕರು ಕುಮಾರ ಲಕ್ಷ್ಮೀ ಬಗ್ಗೆ ಹೆಮ್ಮ ಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here