ಮೂಡಲಗಿ: ಆ,09- ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ,ಹಾಲಾಡಿ (ಕುಂದಾಪೂರ) ಇವರಿಂದ ಮೂಡಲಗಿ ಪಟ್ಟಣದ ಬಸವ ಮಂಟಪದಲ್ಲಿ ಯಕ್ಷಗಾನ ಕಲಾಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಉದ್ಘಾಟರಾಗಿ ಆಗಮಿಸಿದ ಎಸ್.ಜಿ.ಢವಳೇಶ್ವರ ಉಪಾಧ್ಯಕ್ಷ ಡಿಸಿಸಿ ಬ್ಯಾಂಕ್ ಬೆಳಗಾವಿ.ಮುಖ್ಯ ಅತಿಥಿಯಾಗಿ ಆಗಮಿಸಿದ ಡಾllಸಂಜಯ ಶಿಂಧಿಹಟ್ಟಿ ಅಧ್ಯಕ್ಷರು ಕ ಸಾ ಪ ಮೂಡಲಗಿ.
ನಮ್ಮ ಭಾರತ ದೇಶವು ವಿಭಿನ್ನ ಸಂಸ್ಕೃತಿಗಳ ತವರೂರು.ಜಗತ್ತಿನಲ್ಲೇ ನಮ್ಮ ದೇಶವು ಸಾಕಷ್ಟು ಕಲೆ,ಸಂಸ್ಕೃತಿ ಹಾಗೂ ಸಾಹಿತ್ಯದ ಖನಿಜಗಳನ್ನು ತುಂಬಿಕೊಂಡಿದೆ. ಆದರೆ ನಾವಿವತ್ತು ನಮ್ಮ ಮಕ್ಕಳಿಗೆ ಕೇವಲ ಉದ್ಯೋಗ- ವ್ಯಾಪಾರ, ಹಣ ಮಾಡುವ ಶಿಕ್ಷಣವನ್ನು ಮಾತ್ರ ನೀಡುತ್ತಿದ್ದೇವೆ.ಆದರೆ ನಮ್ಮ ನಾಡಿನ ಕಲೆ,ಸಾಹಿತ್ಯ ಪರಿಸರ ಇವುಗೆಲ್ಲವೂ ಅನಾದಿ ಕಾಲದಿಂದಲೂ ಇಂದಿನವರೆಗೂ ಹೀಗೆ ಉಳಿದುಕೊಂಡು ಬರಲು ಸಾಕಷ್ಟು ಜನರು ತ್ಯಾಗ, ಬಲಿದಾನ ಹಾಗೂ ಸದೃಢ ಸಮಾಜದ ನಿರ್ಮಾಣದ ಯುವಪೀಳಿಗೆಗೆ ತಿಳಿಸಿಕೊಡುವ ವಿಚಾರದಿಂದ ಈ ಕಲಾ ತಂಡದವರು ನಮ್ಮ ನಗರಕ್ಕೆ ಯಕ್ಷಗಾನ ಪ್ರದರ್ಶನ ನೀಡಲು ಬಂದಿದ್ದಾರೆ. ಅತಿಥಿಗಳಾಗಿ ಆಗಮಿಸಿದ ರಾಮಣ್ಣ ಹಂದಿಗುಂದ,ಈರಪ್ಪ ಬನ್ನೂರ,ಡಾllಎಸ್.ಎಸ್.ಪಾಟೀಲ,ಚಂದ್ರು ಗಾಣಿಗ, ರುದ್ರಪ್ಪ ವಾಲಿ,ಲಕ್ಷ್ಮೀಶ ಉಡುಪಿ,ಆನಂದ ಗಿರಡ್ಡಿ,ಶೇಖರ ಪೂಜೇರಿ, ಗೋಪಾಲ ಪೂಜೇರಿ, ರಾಮು ದೇವಾಡಿಗ ಹಾಗೂ ಯಕ್ಷಗಾನ ಕಲಾ ಮಂಡಳಿ ಉಪಸ್ಥಿತರಿದ್ದರು.