ಆಗಸ್ಟ್ 9 ರ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು(JCTU) ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಮಹಾಧರಣಿ(ಮಹಾಪಡಾವ್) ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಳೆಗ್ಗೆ 11.30 ಕ್ಕೆ ಘೋಷಣೆಗಳೊಂದಿಗೆ ಸಭೆ ಆರಂಭಗೊಂಡಿತು.
ಶೌಕತ್ ಆಲಿ(INTUC) ದೀಪಕ್ (AITUC) ನಾಗನಾಥ್(HMS) ಕೆ.ಮಹಾಂತೇಶ್ (CITU) ನಿರ್ಮಲ(AICCTU) ಆಲಿ(TUCC) ಷಣ್ಮುಗಂ(AIUTUC) ಮೀಲ್ಕೀಯೋರ್(KWU) ಮೈಕೆಲ್ ಫರ್ನಾಂಡೀಸ್ (HMKP) ಗಂಗಾ ಬೈರಯ್ಯ ( KIEEF) ಧನಶೇಖರ್ (NCL) ನೇತೃತ್ವದ ಅಧ್ತಕ್ಷೀಯ ಮಂಡಳಿ ಕಲಾಪ ನಿರ್ವಹಿಸಿತು.
ಸಭೆಯನ್ನು ಉದ್ದೇಶಿಸಿ ಶಾಮಣ್ಣ ರೆಡ್ಡಿ(INTUC) ವಿಜಯಭಾಸ್ಕರ್ (AITUC) ನಾಗನಾಥ್( HMS) ಪ್ರತಾಪತ ಸಿಂಹ(CITU) ಅಪ್ಪಣ್ಣ( AICCTU) ಜಿ.ಆರ್.ಶಿವಶಂಕರ್( TUCC) ಷಣ್ಮುಗಂ(AIUTUC) ಕಾಳಪ್ಪ(HMKP) ಮೀಲ್ಕೀಯೋರ್ (KWU) ಗಂಗಬೈರಯ್ಯ( KIEEF) ಹಾಗೂ ಧನಶೇಖರ್ (NCL) ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೊನೆಯಲ್ಲಿ ಅಧ್ಯಕ್ಷೀಯ ಮಂಡಳಿ ಪರವಾಗಿ ಹಿರಿಯರಾದ ಮೈಕೆಲ್ ಫರ್ನಾಂಡೀಸ್ ಹಾಗೂ ಕಾಮ್ರೇಡ್ ದಿಲೀಪ್ ಮಾತನಾಡಿದರು.
INTUC ಅಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್, CITU ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ, KWU ಅದ್ಯಕ್ಷ ಇ.ಕೆ.ಎನ್ ರಾಜನ್, ಹಿರಿಯ ವಕೀಲ ಅನಂತರಾಮ್ ಸೇರಿದಂತೆ ಎಲ್ಲ ಕೇಂದ್ರ ಕಾರ್ಮಿಕ ಸಂಘಗಳಿಂದ ನೂರಾರು ಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು