ಉತ್ತರ ಕನ್ನಡದ ಜಿಲ್ಲೆಯ ದಾಂಡೇಲಿ ನಗರಸಭಾ ಮಾಜಿ ಅಧ್ಯಕ್ಷರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಉಪಾಧ್ಯಕ್ಷರೂ ಆದ ಹರೀಶ ನಾಯ್ಕ(71) ಜೋಯಿಡಾದ ರಾಮನಗರದಲ್ಲಿರುವ ಅವರ ಮನೆಯಲ್ಲಿ ಇಂದು ಬೆಳೆಗ್ಗೆ ನಿಧನರಾದ್ದಾರೆ
ಅವರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ನಿವೃತ್ತ ಶಿಕ್ಷಕಿಯಾದ ಹೆಂಡತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಪಾರ ಪ್ರಮಾಣ ಕಾರ್ಯಕರ್ತರು ಹಾಗೂ ಬಂದು ಬಳಗವನ್ನು ಅಗಲಿದ್ದಾರೆ ಕಾಮ್ರೇಡ್ ಹರೀಶ ನಾಯ್ಕ ಅವರ ನಿಧನಕ್ಕೆ ಸಿಐಟಿಯು ರಾಜ್ಯ ಸಮಿತಿ ತೀವ್ರ ದುಃಖ ವ್ಯಕ್ತಪಡಿಸಿದೆ ಅವರ ಕುಟುಂಬದ ಸದಸ್ಯರಿಗೆ ತೀವ್ರ ಸಾಂತ್ವಾನ ವ್ಯಕ್ತಪಡಿಸಿದೆ.
ಮೂಲತಃ ಕಾರವಾರದ ಅವರು ಸ್ನಾತಕೋತ್ತರ ಪದವಿ ಪಡೆದು ದಾಂಡೇಲಿ ಪೇಪರ್ ಮಿಲ್ ನಲ್ಲಿ ಕಾರ್ಮಿಕರಾಗಿ ಕಾರ್ಮಿಕ ನಾಯಕರಾಗಿ ಸೇವೆ ಸಲ್ಲಿಸಿದರು.
ಮಾತ್ರವಲ್ಲ ದಾಂಡೇಲಿ ನಗರ ಸಭೆಗೆ ಸಿಪಿಐ(ಎಂ) ಪಕ್ಷದ ಪರವಾಗಿ ಆಯ್ಕೆಯಾಗಿ ಉಪಾಧ್ಯಕ್ಷರಾಗಿ ಹಂಗಾಮಿ ಅಧ್ಯಕ್ಷರಾಗಿ ಜನತೆಯ ಸೇವೆಯನ್ನು ಮಾಡಿದ್ದಾರೆ.
ಸಿಐಟಿಯುಉತ್ತರ ಕನ್ನಡ ಜಿಲ್ಲಾ ಸಮಿತಿಗೆ ಎರಡು ಅವಧಿ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯ ಮುನ್ಸಿಪಲ್ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ,ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಉಪಾಧ್ಯಕ್ಷರಾಗಿ ಪ್ರಸ್ತುತ ನಿರ್ವಹಿಸುತ್ತಿದ್ದರು.
ಪ್ರಾರಂಭದಲ್ಲಿ ಹಂಚು ಕಾರ್ಮಿಕರ ಸಂಘ, ಪಂಚಾಯತ್ ಕಾರ್ಮಿಕರು, ಕಾರವಾರದಲ್ಲಿ ಗ್ರಾಸಿಂ ಗುತ್ತಿಗೆ ಕಾರ್ಮಿಕರ ಸಂಘ, ಕದ್ರಾ, ಅಂಬಿಕಾನಗರ, ಗಣೇಶ್ ಗುಡಿ ವಿದ್ಯುತ್ ಗುತ್ತಿಗೆ ಕಾರ್ಮಿಕರ ಸಂಘ, ಕೈಗಾ ಅಣು ವಿದ್ಯುತ್ ಸ್ಥಾವರ ಗುತ್ತಿಗೆ ಕಾರ್ಮಿಕರ ಸಂಘ, ವನ್ಯಜೀವಿ ಗುತ್ತಿಗೆ ಕಾರ್ಮಿಕರ ಸಂಘ, ಕಟ್ಟಡ ಕಾರ್ಮಿಕರು ಮತ್ತು ಗ್ರಾಮೀಣ ಕೆಲಸಗಾರರ ಸಂಘ ಹೀಗೆ ಅನೇಕ ವಿಭಾಗದ ಕಾರ್ಮಿಕರನ್ನು ಸಂಘಟಿಸುವಲ್ಲಿ ನಾಯಕತ್ವ ನೀಡುವಲ್ಲಿ ಇವರ ಪಾತ್ರ ಸ್ಮರಣೀಯ. ಅಂಗನವಾಡಿ ನೌಕರರು, ಅಕ್ಷರದಾಸೋಹ, ಆಶಾ ನೌಕರರ ಹೋರಾಟ ಗಳಿಗೆ ಮಾರ್ಗದರ್ಶನ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಂತ ಕಾರ್ಮಿಕ ಚಳುವಳಿಯನ್ನು ಕಟ್ಟುವಲ್ಲಿ ಹರೀಶ ನಾಯ್ಕ ಅವರ ಪಾತ್ರ ಮಹತ್ವದ್ದಾಗಿದೆ.
ಸ್ವತಃ ಲೇಖಕರು, ಕವಿಗಳು ಆಗಿದ್ದ ಅವರು ಹಲವು ಕಾದಂಬರಿ,ಕಥೆ, ಕವನಗಳನ್ನು
ಹಾಗೂ ನೂರಾರು ವೈಚಾರಿಕ ಬರಹಗಳನ್ನು ರಚಿಸಿದ್ದಾರೆ ಹರೀಶ ನಾಯ್ಕ ಅವರ ನಿಧನ ರಾಜ್ಯದ ಕಾರ್ಮಿಕ ವರ್ಗದ ಚಳವಳಿಗೆ ತುಂಬಾಲಾರದ ನಷ್ಟವನ್ನುಂಟು ಮಾಡಿದೆ. ತೀವ್ರ ಶೋಷಣೆಗೊಳಗಾಗಿದ್ದ ಕಾರ್ಮಿಕ ವರ್ಗಗಳಿಗೆ ನ್ಯಾಯ ಒದಗಿಸಲು ತಮ್ಮ ಜೀವಿತದ ಕೊನೆಯ ದಿನಗಳವರೆಗೂ ಶ್ರಮಿಸಿದ್ದ ಅವರ ಆದರ್ಶಮಯ ಕೆಲಸಗಳನ್ನು ಮುಂದುವರೆಸಲು ಸಿಐಟಿಯು ನಿರ್ಧರಿಸಿದೆ. ಆಗಲಿದ ಹಿರಿಯ ನಾಯಕನಿಗೆ ಮತ್ತೊಮ್ಮೆ ಸಿಐಟಿಯು ರಾಜ್ಯ ಸಮಿತಿ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತದೆ.