ದಾವಣಗೆರೆ: ಮಳೆಯಿಂದ ಮುಂದೂಡಲಾಗಿದ್ದ ಜಿಲ್ಲಾ ವರದಿಗಾರರ ಕೂಟದ ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿದೆ. ಭಾನುವಾರ ಮುಂದೂಡಲಾಗಿದ್ದ ಪಂದ್ಯಗಳು ನಡೆಸಿದ್ದು ಪ್ರಥಮ ಸ್ಥಾನವನ್ನು ಕೂಟದ ಕ್ರೀಡಾ ಕಾರ್ಯದರ್ಶಿ ರಾಮ್ ಪ್ರಸಾದ್ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನವನ್ನು ಕೂಟದ ಪ್ರಧಾನ ಕಾರ್ಯದರ್ಶಿ ವರದರಾಜ್ ನೇತೃತ್ವದ ತಂಡ ಪಡೆದಿದೆ. ಮೊದಲು ಟಾಸ್ ಗೆದ್ದ ಅವೆಂಜರ್ ತಂಡ ನಿಗದಿತ ಆರು ಓವರ್ ಗಳಿಗೆ ಸಿದ್ದಯ್ಯ ಹಿರೇಮಠ್, ನೂರುಲ್ಲ, ಅನೀಲ್ ಅವರ ಅದ್ಬುತ ಬ್ಯಾಟಿಂಗ್ ಮೂಲಕ ಒಂದು ವಿಕೇಟ್ ನಷ್ಟಕ್ಕೆ 63 ರನ್ ಗಳಿಸಿತು. ಗುರಿ ಬೆನ್ನಟಿದ ಸಿ ಸ್ಟಾರ್ ಕ್ರಿಕೆಟರ್ಸ್ ತಂಡ ಐದು ವಿಕೆಟ್ ನಷ್ಟಕ್ಕೆ 41 ಗಳಿಸುವುದರ ಮೂಲಕ 23 ರನ್ ಗಳಿಂದ ಸೋಲನ್ನು ಅನುಭವಿಸಿತು.

ಜುಲೈ 2 ರಂದು ಟೂರ್ನಿಗೆ ಇಲ್ಲಿನ ಪೊಲೀಸ್ ಕವಾಯತು ಮೈದಾನಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸ್ನೇಹ ಸೌಹಾರ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಗಿತ್ತು. ಕೂಟದಿಂದ ಅವೆಂಜರ್ ಕ್ರಿಕೆಟರ್ಸ್, ಸಿ ಸ್ಟಾರ್ ಕ್ರಿಕೆಟರ್ಸ್, ರೆಬಲ್ ಕ್ರಿಕೆಟರ್ಸ್ ಹಾಗೂ ಮಿಡಿಯಾ ಡೈನಾಮಿಕ್ ಎಂಬ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ವರುಣನ ಆರ್ಭಟದಿಂದ ಫೈನಲ್ ಹಾಗೂ ಉಳಿದ ಪಂದ್ಯಾವಳಿಯನ್ನು ಮುಂದೂಡಲಾಗಿತ್ತು. ಆ.6 ರಂದು ನಡೆದ ಫೈನಲ್ ಪಂದ್ಯದಲ್ಲಿ ಅವೆಂಜರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡರೆ,  ಸ್ಥಾನವನ್ನು ಸಿ ಸ್ಟಾರ್ ಕ್ರಿಕೆಟರ್ಸ್ ತಂಡ ಅಲಂರಿಸಿದೆ. ಮೂರನೆ ಸ್ಥಾನಕ್ಕಾಗಿ ರೆಬಲ್ ಹಾಗೂ ಮಿಡಿಯಾ ಡೈಮಂಡ್ ಕ್ರಿಕೆಟರ್ಸ್ ಪಂದ್ಯದಲ್ಲಿ ರೆಬಲ್ ತಂಡ ಮೂರನೇ ಸ್ಥಾನ ಪಡೆಯಿತು.

ರೂಚಕ ಪಂದ್ಯದಲ್ಲಿ ಗೆದ್ದ ಪೊಲೀಸ್ ತಂಡ

ಪ್ರತಿಕಾದಿನಾಚರಣೆಯ ಹಿನ್ನಲೆ ಪೊಲೀಸ್ ತಂಡ ಹಾಗೂ ಪತ್ರಕರ್ತರ ತಂಡದ ನಡುವೆ ಅಫೆಶಿಯಲ್ ಪಂದ್ಯ ನಡೆದಿದ್ದು ಟಾಸ್ ಗೆದ್ದ ಪತ್ರಕರ್ತರ ತಂಡ ನಿಗದಿತ ಆರು ಓವರ್ ಗಳಲ್ಲಿ ಆರು ವಿಕೇಟ್ ನಷ್ಟಕ್ಕೆ 46 ರನ್ ಗಳಿಸಿತ್ತು, ಗುರಿ ಬೆನ್ನಟ್ಟಿದ ಪೊಲೀಸ್ ತಂಡ ಆರು ವಿಕೇಟ್ ನಷ್ಟಕ್ಕೆ ಕೊನೆಯ ಒಂದು ಬಾಲ್ ಗೆ ಒಂದು ರನ್ ಪಡೆದು ರೋಚಕ ಜಯಗಳಿಸಿತು.

LEAVE A REPLY

Please enter your comment!
Please enter your name here