ಮೂಡಲಗಿ: ಜು,17-ತಾಲೂಕಿನ ವಡೇರಹಟ್ಟಿ ಗ್ರಾಮದ ದೇವಸ್ಥಾನಕ್ಕೆ ಸೋಮವಾರ ಬೆಳ್ಳಗಿನ ಜಾವ 6ಗಂಟೆಗೆ ಶಂಕರ ಮತ್ತು ಆತನ ಪತ್ನಿ ಪ್ರಿಯಾಂಕ ಜೊತೆಯಲ್ಲಿ ದೇವರ ದರ್ಶನಕ್ಕೆ, ಹೋದ ನಂತರ ಹೆಂಡತಿ ಎದುರೆ ಗಂಡ ಶಂಕರ (26) ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿರುವುದು.
ಅಧಿಕ ಮಾಸದ ಭೀಮನ ಅಮವಾಸ್ಯೆ ನಿಮಿತ್ತ ಗಂಡ- ಹೆಂಡಿರು ಇಬ್ಬರು ಬೈಕ್ ಮೇಲೆ ಬೆಳಗ್ಗೆ 6ಗಂಟೆ ಸುಮಾರಿಗೆ ವಡೇರಹಟ್ಟಿ ಗ್ರಾಮದ ಶ್ರೀ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು.ದೇವರ ದರ್ಶನ ಮುಗಿಸಿ ಮನೆಗೆ ಹೋಗುವಷ್ಟರಲ್ಲಿ ದೇವಸ್ಥಾನದ ಆವರಣದಲ್ಲಿ ಮಚ್ವಿನಿಂದ ಹಲ್ಲೆ ಮಾಡಲಾಗಿದೆ.ಮಚ್ಚಿನಿಂದ ಹಲ್ಲೆಗೊಳಗಾದ ಯುವಕ ಶಂಕರ ಸಿದ್ದಪ್ಪ ಜಗಮುತ್ತಿ(26) ಗಂಭೀರವಾಗಿ ಗಾಯಗೊಂಡ ಪರಿಣಾಮದಿಂದ ಸ್ಥಳದಲ್ಲಿ ಸಾವುನಪ್ಪಿದ್ದಾನೆ ಎಂದು ಹೇಳಲಾಗುತ್ತದೆ.
ಶಂಕರ ಹಾಗೂ ಪ್ರಿಯಾಂಕ ಇವರ ಕಳೆದ ನಾಲ್ಕು ತಿಂಗಳ ಹಿಂದೆ ಅಷ್ಟೇ ಮದುವೆ ಆಗಿದೆ ಅಂತ ಗೊತ್ತಾಗಿದೆ.ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳತ್ತಿದ್ದರು ಮತ್ತು ಜುಲೈ 16 ರಂದು ನನ್ನ ಹುಟ್ಟು ಹಬ್ಬ.ರವಿವಾರ ಎಲ್ಲರೂ ಕೂಡಿಕೊಂಡು ನನ್ನ ಜನ್ಮದಿನವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.ಅವರ ಮೇಲೆ ಯಾರಿಗೆ ದ್ವೇಷವಿತ್ತು ಎಂದು ನನಗೆ ಗೊತ್ತಿಲ್ಲವೆಂದು ಪತ್ನಿ ಪ್ರಿಯಾಂಕ ಹೇಳಿದ್ದಾರೆ. ಈ ದುರ್ಘಟನೆಯಿಂದ ದೇವಸ್ಥಾನದಲ್ಲಿ ಭಯದ ವಾತವರಣ ನಿರ್ಮಾಣ ವಾಗಿದೆ.
ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸ್ ಠಾಣಾ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವಿಷಯ ತಿಳಿದು ಬೆಳಗಾವಿ ಎಸ್ ಪಿ ಡಾllಸಂಜೀವ ಪಾಟೀಲ ಸ್ಥಳಕ್ಕೆ ಬೇಟಿ ನೀಡಿದ್ದಾರೆ.