ಜನಸಾಮಾನ್ಯರು / ರೈತರು / R. T. 1. ಕಾರ್ಯಕರ್ತರು ಸರ್ಕಾರಿ ಇಲಾಖೆಗಳಲ್ಲಿ (ಕಂದಾಯ ಇಲಾಖೆ/ ಮಹಾನಗರ ಪಾಲಿಕೆ ನಗರ ಪಾಲಿಕೆ ಗ್ರಾಮ ಪಂಚಾಯತಿ ಆರೋಗ್ಯಇಲಾಖಾ ) ಗಳಲ್ಲಿ ತಮ್ಮ ಜಮೀನು. ನಿವೇಶನ ಹಾಗೂ ಹಲವು ದಾಖಲೆಗಳನ್ನು ಕೇಳಿದಾಗ ಕೆಲವು ಸಂಧರ್ಭದಲ್ಲಿ ಇಲಾಖೆಯ ನೌಕರರು ಮಾಹಿತಿ / ದಾಖಲೆಗಳು ಲಭ್ಯವಿಲ್ಲ ಎಂದೂ ಹೇಳುವುದು. ಹಾಗೂ ಹಿಂಬರಹ ನೀಡುವುದು ಇದೆ ಎಂದೂ ಕೇಳಿಬರುತ್ತದೆ. ಹಾಗಾದರೆ ಈ ದಾಖಲೆಗಳು ಎಲ್ಲಿ ಹೋದವು ಎಂಬುದಕ್ಕೆ ಉತ್ತರ ಬೇಕು ಅಲ್ಲವೆ. ದಾಖಲೆಗಳು ಕಳುವು ಆಗಿವೆ. ನಾಶ ಆಗಿವೆ ಎಂದೂ ಹೇಳುವರಿಗೆ ಸಂಬಂದ ಪಟ್ಟ ನೌಕರರಿಗೆ/ಅಧಿಕಾರಿಗಳಿಗೆ ಶಿಕ್ಷೆ ಆಗಬೇಕಲ್ಲವೆ. ಆದರೆ ಇದ್ಯಾವುದು ಸರ್ಕಾರದಿಂದ ನಡೆಯುತ್ತಿಲ್ಲ ಎಂಬ ಮಾತು ಗಳು ಕೇಳಿ ಬರುತ್ತದೆ. ಮಾಹಿತಿ ಕೇಳಿದವರು ಸಹಾ ಮುಂದಿನ ಕ್ರಮಗಳಿಗೆ ಕೈ ಬಿಡುವುದು ಸಹಾ ಇಂತ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಸಂಬಂದ ಪಟ್ಟನೌಕರರನ್ನು/ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿದರೆ ಇಂತ ಅವ್ಯಸ್ಥೆಗೆ ಕಡಿವಾಣ ಹಾಕಬಹುದು ಎಂಬುದು ಪ್ರಜ್ಞಾವಂತರಿಂದ ಕೇಳಿ ಬರುತ್ತದೆ..ಇಲ್ಲಿ ಸಮಸ್ಯೆ ಏನೆಂದರೆ ಪ್ರಭಾವಿಗಳು ತಮಗೆ ಏನಾದರು ಅನಾನುಕೂಲ ಆಗುತ್ತದೆ ಎಂಬ ಸಂಧರ್ಭದಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ ಎನ್ನಲಾಗುತ್ತದೆ.. ಒಬ್ಬ ರೈತ ತಾನು ಕಂಡ ಬಗೆ ಹೇಳಿದು ಏನೆಂದರೆ ಒಂದು ನಾಡ ಕಛೇರಿಗೆ ತನ್ನ ದಾಖಲೆ ಗಾಗಿ ಹೋಗಿ ದಾಗ ಜನಸಂದಣಿ ಇರುವ ಸಂಧರ್ಭದಲ್ಲಿ ಒಬ್ಬ ಪ್ರಭಾವಿ ರಾಜಕಾರಣಿ ತನ್ನ ಸಂಬಂದ ಪಟ್ಟ ದಾಖಲೆಗಾಗಿ ನೌಕರನ್ನು ಕೇಳದೆ ಅಥಾವ ಅವರಿಂದ ಪಡೆಯದೆ ನೇರವಾಗಿ ದಾಖಲೆ ಕಪಾಟು ಗೆ ಕೈ ಹಾಕಿ ಹುಡಕಿ ತೆಗೆದುಕೊಂಡು ಹೋಗಿದನ್ನು ಕೇಳಿದಾಗ ಆ ಪ್ರಭಾವಿ ಯಾವುದೊ ಪ್ರಕರಣದಲ್ಲಿ ದಾಖಲೆ ತೆಗೆದುಕೊಂಡು ಹೋಗಿದ್ದಾನೆ. ತನ್ನ ಎದುರಾಳಿಗೆ ಈ ದಾಖಲೆ ಸಿಗದಂತೆ ಮಾಡಿರುವ ಸಂಭವ ಇರುತ್ತದೆ. ಈ ರೀತಿ ಪ್ರಕರಣಗಳು ನಡೆಯುವುದರಿಂದ ದಾಖಲೆಗಳು ಲಭ್ಯವಿಲ್ಲದಂತೆ ಆಗಬಹುದು ಅಥಾವ ಸರ್ಕಾರಿ ನೌಕರರೇ / ಅಧಿಕಾರಿಗಳೆ ಈ ಕೆಲಸವನ್ನು ಮಾಡಬಹುದು. ಅದರಲ್ಲೂ ಕಂದಾಯ ಇಲಾಖೆಯಲ್ಲಿ ಇಂತ ಪ್ರಕರಣಗಳು ಹೆಚ್ಚು ಎಂಬುದು ಕೇಳಿ ಬರುತ್ತದೆ. ಆದರೆ ಸರ್ಕಾರ ಇಂತ ಪ್ರಕರಣಳಿಗೆ ಕಾರಣರಾದವರನ್ನು ಸೇವೆಯಿಂದ ವಜಾ ಮಾಡುವುದು ಅಗತ್ಯ ಎಂಬುದು ನಾಗರಿಕ ಕೇಳಿ ಬರುತ್ತದೆ. ಇಲ್ಲದಿದ್ರೆ ಇಂತ ಪ್ರಕರಣಗಳು ಹೆಚ್ಚಾಗಲು ಕಾರಣ ಆಗುತ್ತದೆ. ಸರ್ಕಾರ ಈ ಪ್ರಯತ್ನ ಮಾಡದೆ ಇದ್ದರೆ ಅರ್ಜಿದಾರರು ನ್ಯಾಯಾಲದಲ್ಲಿ ಪ್ರಶ್ನೆ ಮಾಡುವದನ್ನು ಮಾಡಿದರೆ ನ್ಯಾಯಾಲಯದಲ್ಲಿ ಶಿಕ್ಷೆಯಾದರೆ ಇಂತ ಪ್ರಕರಣಗಳು ನಿಲ್ಲಲ್ಲು ಸಾದ್ಯ ಎಂಬ ಮಾತು ಗಳು ಕೇಳಿ ಬರುತ್ತದೆ(.N.S. ಈಶ್ವರಪ್ರಸಾದ್.ನೇರಳೇಕೆರೆ. ಮಧುಗಿರಿ ತಾ.)
Home ಸಾರ್ವಜನಿಕ ಧ್ವನಿ ದಾಖಲೆಗಳು ಲಭ್ಯವಿಲ್ಲ ಎಂದರೆ ಅರ್ಥವೇನು ? ಈ ದಾಖಲೆಗಳು ಎಲ್ಲಿ ಹೋದವು ಎಂಬುದಕ್ಕೆ ಉತ್ತರ ಬೇಕು...