ದಾವಣಗೆರೆ :ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ:ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಜಿ.ಬಿ ವಿನಯ್ ಕುಮಾರ್**ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಹಾಗೂ ಪ್ರತಿಷ್ಠಿತ ಹೆಸರಾಂತ “ಇನ್ಸೈಟ್ಸ್ ಐಎಎಸ್”(INSIGHTS IAS) ಸಂಸ್ಥೆಯ ಸಂಸ್ಥಾಪಕರು, ಹಾಗೂ ತಮ್ಮ ವಿದ್ಯಾ ಸಂಸ್ಥೆಯ ಮುಖೇನಾ ದೇಶದ ಆನೇಕ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿ, ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವಂತೆ ಮಾಡಿ, ದೇಶ ಸೇವೆಯನ್ನು ಮಾಡುವಂತೆ ಪ್ರೇರೇಪಿಸಿರುವ ರಾಜ್ಯದ ಹೆಸರಾಂತ ಶಿಕ್ಷಣ ಪ್ರೇಮಿ, ಯುವ ನಾಯಕ, ಸರಳ ಸಜ್ಜನಿಕೆಯ ವ್ಯಕ್ತಿಯಾದ ಸನ್ಮಾನ್ಯ ಶ್ರೀಯುತ ಜಿ.ಬಿ ವಿನಯ್ ಕುಮಾರ್ ರವರು ಇಂದು ಜಗಳೂರಿಗೆ ಆಗಮಿಸಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ, ತಾಲೂಕಿನ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದರು.
**ಈ ಸಂದರ್ಭದಲ್ಲಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷರಾದ ಕೆ.ಪಿ ಪಾಲಯ್ಯ, ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಶಂಷೀರ್ ಅಹ್ಮದ್, ಓಮಣ್ಣ, ತಿಮ್ಮಣ್ಣ, ಪ್ರಕಾಶ್ ರೆಡ್ಡಿ, ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕೆಂಚೋಳ್, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಹೆಚ್ ಜಿ ನಾಗಾರಾಜ್, ರವಿ ಯು.ಸಿ ಹುಚ್ಚಂಗಿಪುರ ಹಾಗೂ ಇನ್ನಿತರ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.