ಅಪ್ಪ ದೇವೇಗೌಡರು, ನಾನು ಒದ್ದಂಗೆ ಮಾಡ್ತಿನಿ ಮಗ್ನೆ ಕುಮಾರ ನೀನು ಅತ್ತಂಗೆ ಮಾಡು ಅನ್ನೊ ರಾಜಕೀಯ ಸಿದ್ದಾಂತವೊಂದನ್ನು ತಮ್ಮ ಕುಟುಂಬರಾಕಾರಣದ ಯಶಸ್ವಿಗಾಗಿ ಚನ್ನಾಗಿಯೇ ಪಳಗಿಸಿ ಕೊಂಡಿದ್ದಾರೆ.ಅಪ್ಪನ ಮಾತಿಲ್ಲದೆ ಮಗ ಕುಮಾರಸ್ವಾಮಿ ಎನನ್ನೂ ಮಾಡುವುದಿಲ್ಲ.ಅಪ್ಪನ ಅಪ್ಪಣೆಯೆ ಕುಮಾರಸ್ವಾಮಿಯ ರಾಜಕೀಯ ರಹದಾರಿ.ಇರಲಿ,ನಾವು ಅಂದುಕೊಂಡಂತೇ ಕುಮಾರಸ್ವಾಮಿ ಬಿಜೆಪಿ ರಾಜಕೀಯ ವಿಷವರ್ತುಲಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತಿದ್ದಾರೆ.ದೇವೇಗೌಡರಿಗೆ ವಯಸ್ಸು ಮಾಗುತ್ತಿದೆ.ಕಳೆದ ಚುನಾವಣೆಯ ಸಂದರ್ಭದಲ್ಲೆ ಅವರೊಂದು ಮಾತು ಹೇಳಿದ್ದರು,ನಾನು ಕುಮಾರಸ್ವಾಮಿ ಮುಖ್ಯ ಮಂತ್ರಿ ಕುರ್ಚಿಯಲ್ಲಿ ಕೂರುವುದನ್ನು ಮತ್ತೊಮ್ಮೆ ನೋಡಬೇಕು ಅಂಥ,2023 ರ ಚುನಾವಣೆಯಲ್ಲಿ ಬಹುಮತ ಬಂದು ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಮಾಡೊದನ್ನು ಕಾಣಬೇಕು ಎಂಬ ಹಗಲು ಬಿದ್ದ ಕನಸನ್ನೆ ಬೆನ್ನತ್ತಿ ದೇವೆಗೌಡರು ತಮ್ಮ ಸುಧೀರ್ಗ ರಾಜಕಾರಣದ ಶ್ರಮ ಹಾಕಿದ್ದರು,ಆದರೆ ಗೆದ್ದದ್ದು ಮಾತ್ರ ಹತ್ತೊಂಬತ್ತು!!ಅಲ್ಲಿಗೆ ದೇವೇಗೌಡರ ರಾಜಕೀಯ ತರ್ಕ ಮತ್ತು ಮಗ ಕುಮಾರ ಸ್ವಾಮಿ ಮುಖ್ಯ ಮಂತ್ರಿಯಾಗುವ ಕನಸು ಭಗ್ನವಾದರೆ ಮತ್ತೊಂದು ಆಘಾತ ಅವರನ್ನು ಹಿಡಿಯಾಗಿಸಿದ್ದು ಯಾವುದೆಂದರೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ ಕಾರಣಕ್ಕೆ ಪಕ್ಷದ ಮಾನ್ಯತೆಯೇ ರದ್ದಾಗುವ ಆತಂಕ….ಅದೂ…ಇರಲಿ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿನ ವಿಷಯಕ್ಕೆ ಬಂದರೆ, ಕಮರಿದ ರಾಜಕೀಯ ಅಧಿಕಾರದ ಕನಸುಗಳ ಬೆನ್ನು ಹತ್ತಿ ಕುಮಾರಸ್ವಾಮಿ ಜಾತ್ಯತೀತ ಬದ್ದತೆಯನ್ನು ಕೆಂಗೇರಿ ಮೊರಿಗೆಸೆದು ಆರ್ ಎಸ್ ಎಸ್ ಕೋಮುವಾದದ ಕೂಸಾದ ಬಿಜೆಪಿಯೊಳಗೆ ಚಡ್ಡಿತೊಡಲು ತಮ್ಮ ಸೊಂಟದ ಸೈಜುಕೊಟ್ಟು ತಲೆಗೆ ಕರೀ ಟೊಪಿ ಹಾಕಿಕೊಳ್ಳುವ ಭರ್ಜರಿ ಸಂಭ್ರಮದಲ್ಲಿದ್ದಾರೆ.ಹಾಗಂಥಾ ಅಪ್ಪಾ ಮಗ ಯಾವತ್ತೂ ನೈತಿಕತೆಯ ರಾಜಕಾರಣಮಾಡಿದವರೇ ಅಲ್ಲ.ದೇವೇಗೌಡರು ಅಧಿಕಾರಕ್ಕಾಗಿ ದಶಕಗಳ ಹಿಂದಿನ ಅವರು ಹೆಣೆದಿದ್ದ ಅನೈತಿಕ ರಾಜಕಾರಣವನ್ನು ಅವಲೋಕಿಸುತ್ತಾ ಬಂದರೆ ಅರ್ಥವಾಗುತ್ತದೆ.ಈಗ ಮಗನನ್ನು ಮುಖ್ಯ ಮಂತ್ರಿ ಮಾಡುವುದಕ್ಕಾಗಿ ಈ ಇಳಿವಯಸ್ಸಿನಲ್ಲು ತಮ್ಮ ಅಳಿದುಳಿದ ರಾಜಕೀಯ ತಂತ್ರ ಕುತಂತ್ರಗಳನ್ನು ಜಳಪಿಸದೆ ಬಿಡುವುದಿಲ್ಲ.ಜಳಪಿಸುತ್ತಲೇ ಇದ್ದಾರೆ ಅವು ವಿಫಲವಾಗುತ್ತಿವೆ.ಹಾಗಾಗಿಯೆ ಅವರಿಗೆ ಪಕ್ಷ ಮತ್ತು ಅಧಿಕಾರಗಳೆರಡೂ ಅಸ್ಥಿತ್ವ ಕಳೆದುಕೊಳ್ಳುವ ಜಾಡಿನಲ್ಲಿ ಬಂದು ನಿಂತಿವೆ…ಹಾಗಾಗಿಯೆ ದೇವೆಗೌಡರು ಮಗನನ್ನು ಹುರಿದುಂಬಿಸಿ ಬಿಜೆಪಿ ಮನೆಯ ಅಂಗಳದಲ್ಲಿ ನಿಲ್ಲಿಸಿ ಕೊಮುವಾದಿಗಳ ಚಡ್ಡಿಗಳಿಗೆ ಜೊತೆಮಾಡಿ ಕೃಥಾರ್ತ ಭಾವ ಮೆರೆದಿದ್ದರೆ…ಅದೂ ಸಿದ್ದವಾಗಿದೆ,ಹಾಗಾದರೆ ಅಪ್ಪಾ ಮಗನದು ಯಾವುದು ಸಮಾಜವಾದ, ಯಾವುದು ಬದ್ದತೆಯ ರಾಜಕಾರಣ? ಸಹಜವಾಗಿಯೆ ಪ್ರಶ್ನೆಗಳು ಎದ್ದು ನಿಲ್ಲುತ್ತವೆ.ಹಾಗೆ ನೋಡಿದರೆ,ಕಳೆದ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲು ಅವರನ್ನು ಅಕ್ಷರಶಹಾಃ ಕಂಗೆಡಿಸಿ ಬಿಟ್ಟಿದೆ..ಕುಮಾರಸ್ವಾಮಿಯ ಎದೆಯೊಳಗೆ ಮಗನ ಸೋಲು ಶೊಕದ ಅಲೆ ಯಬ್ಬಿಸಿದರೆ ದೇವೇಗೌಡರಿಗೆ ಮಗನನ್ನು ಮುಖ್ಯ ಮಂತ್ರಿ ಕುರ್ಚಿಯಲ್ಲಿ ನೋಡಲಾಗಲಿಲ್ಲವಲ್ಲಾ ಎನ್ನುವ ಜೀವಮಾನದಲ್ಲಾದ ಮೊದಲ ಮುಖಭಂಗ ಎಂದು ಮನಸ್ಸಿಗಚ್ಚಿಕೊಂಡಿದ್ದಾರೆ…ಹಾಗಾಗಿಯೇ ಅವರಿಗೆ ಸಧ್ಯಕ್ಕೆ ರಾಜಕೀಯವಾಗಿ ಬೇರೆ ಆಯ್ಕೆಗಳೆ ಕಾಣಿಸದೆ ಎನ್ಡಿಎ ಎಂಬ ಕೊಮುವಾದಿ ರಾಜಕಾರಣದ ಒಕ್ಕುಟದ ತೆಕ್ಕೆಗೆ ಬೆಳಕಿನ ಹುಳ ತಾನೇ ತಾನಾಗಿ ಬೆಂಕಿಗೆ ಬಿದ್ದು ಸಾಯುವ ಸ್ವಯಂಕೃತ ದುರಂತಕ್ಕೆ ನಾಂದಿಯಾಡಿದ್ದಾರೆ.ಇದು ಅಪ್ಪಾ ಮಗನದು ಕೊನೆಯ ರಾಜಕೀಯ ಆಟ ದಂತೆ ಕಾಣಿಸುತ್ತಿದೆ.ದೇವೇಗೌಡರು ಅವರ ಜೀವಮಾನದುದ್ದಕ್ಕೂ ಯಾವ ಸಂದರ್ಭದಲ್ಲೂ ತಮ್ಮ ರಾಜಕೀಯ ಇಳಿಕೆ ಮತ್ತು ಸೊಲುಗಳನ್ನು ಸಮಾಧಾನ ಚಿತ್ತದಿಂದ ನೋಡಿದ ಜಾಯಮಾನವೇ ಅವರದಲ್ಲ.ಹಾಗಾಗಿಯೆ ಅವರ ಇಳಿವಸ್ಸಿನಲ್ಲು ಮಗನನ್ನು ತಮ್ಮ ರಾಜಕೀಯ ಹಠದ ದಾಳವಾಗಿ ಉರುಳಿಸಲು ಸಿದ್ದವಾಗಿದ್ದಾರೆ.ಇಲ್ಲಿ,ಕುಮಾರಸ್ವಾಮಿ ಅಪ್ಪನ ರಾಜಕೀಯ ಆಟಕ್ಕೆ ತಮ್ಮನ್ನು ತಾವೆ ಸಮರ್ಪಿಸಿಕೊಂಡು ಬಿಜೆಪಿ ಜೊತೆ ಹೊಂದಾಣಿಕೆಯ ಜೂಜಿಗೆ ಬಿದ್ದಿದ್ದಾರೆ ಪಿತೃ ಆಜ್ಞೆ ಪರಿಪಾಲಕನಾಗುವ ಬರದಲ್ಲಿ ತಾನೇ ಕಳದುಹೊಗುವ ಯೊಚನೆಯನ್ನೂ ಅವರು ಮಾಡಿದಂತಿಲ್ಲ.ಬಿಜೆಪಿಯನ್ನು ಅದ್ಯಾಕೆ ಮತ್ತು ಯಾವ ಭರವಸೆ ಇಟ್ಟುಕೊಂಡು ಕೊಮುವಾದಿಗಳ ಜೊತೆ ಕೈಜೋಡಿಸುತಿದ್ದರೋ ಎಂಬುದು ಜಿಗ್ಞಸೆಯೆನಲ್ಲ ಅದು ಅವರ ರಾಜಕೀಯ ಅಧಿಕಾರದ ದುರಾಸೆ ಮಾತ್ರ….ಜೆಡಿಎಸ್ ಮತ್ತು ದೇವೇಗೌಡರ ಕುಟುಂಬ ರಾಜಕಾರಣದ ಕೊನೆಯ ಪರದೆ ಈಗ ಇಳಿಯಲು ಶುರುವಾಗಿದೆ…ನೈತಕತೆಯೇ ಇಲ್ಲದ ಇವರ ರಾಜಕೀಯ ಇದ್ದರೇನು ನಾಶವಾದರೇನು..(.ಟಿಎನ್ ಷಣ್ಮುಖ16 ಜುಲೈ 23)

LEAVE A REPLY

Please enter your comment!
Please enter your name here