ಏಕನಾಗರೀಕ ಸಂಹಿತೆ ಮೊದಲು ಹಿಂದೂ ಧರ್ಮಕ್ಕೆ ಬೇಕಾಗಿದ್ದಿಯಾ?
ಏಕನಾಗರೀಕ ಸಂಹಿತೆ ಬಗೆ ದೇಶದಲ್ಲಿ ಚರ್ಚೆ ಆಗುತ್ತಿರುವ ಸಂಧರ್ಭದಲ್ಲಿ ಹಿಂದೂ ತ್ವವಾದಿಗಳು ಅಲ್ಪಸಂಖ್ಯಾತರನ್ನು ಗುರಿಯಾಗಿ ಇಟ್ಟುಕೊಂಡು ಚರ್ಚೆ ಮಾಡುತ್ತಾ ಇದ್ದರೆ. ಹಿಂದೂ ಧರ್ಮದ ಕೆಲವು ಪ್ರಜ್ಞಾವಂತರು ಮೊದಲು ಹಿಂದೂ ಧರ್ಮದಲ್ಲಿನ ಆಸಮಾನತೆ ನಿವಾರಣೆ ಮಾಡಲು ಸಮಾನ ನಾಗರೀಕ ಸಂಹಿತೆ ಬರಲಿ. ಹಿಂದೂ ಧರ್ಮದಲ್ಲಿನ ವರ್ಣಶ್ರಮದ ಜಾತಿ ವ್ಯವಸ್ಥೆಯಲ್ಲಿನ ಅಸಮಾನತೆ ನಿವಾರಣೆಗೆ ಮೊದಲು ಅಗತ್ಯ ಬಗೆ ಪ್ರಶ್ನೆ ಮಾಡುವುದು ಇದೆ. ಹಿಂದೂ ಧರ್ಮದಲ್ಲಿನ ದಲಿತರಿಗೆ ಅಸ್ಪಶೃತೆಯ ಹೆಸರನಲ್ಲಿ ನಡೆಸುತ್ತಿರುವ ದೌಜನ್ಯ ನಿವಾರಣೆ ಮಾಡಲು ಅಸ್ಪ ಶೃತೆ ನಿವಾರಣೆ ಮಾಡಲು ಹಾಗೂ ಶೂದ್ರರಲ್ಲಿ ಇರುವ ಅಸಮಾನತೆ ನಿವಾರಣೆ ಮಾಡಲು ಮುಜರಾಯಿ ಇಲಾಖೆಯಲ್ಲಿ ಆರ್ಚಕ ವೃತ್ತಿಯಿಂದ ಸ್ವಚ್ಚಾತಾ ಕಾರ್ಯ ವರಿಗೂ ಎಲ್ಲರಿಗೂ ಮಿಸಲಾತಿ ಕಲ್ಪಿಸಿ ಸಮಾನತೆ ತರುವ ಸಂಹಿತೆಯನ್ನು ತನ್ನಿ. ಎಲ್ಲಾ ಯಾತ್ರಿ ಸ್ಥಳದಲ್ಲಿ ಪಂಕ್ತಿಬೇದ ಇಲ್ಲದಂತೆ ಮಾಡಲು ಕಾನೂನು ಸಂಹಿತೆ ಜಾರಿಗೆ ತನ್ನಿ ಎಂಬ ವಿಮರ್ಶೆಗಳು ಸಹಾ ನಡೆಯುತ್ತಿವೆ.
ಉತ್ತರ ಭಾರತದಲ್ಲಿ ಹಳ್ಳಿಗಳಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆದಾಗ ಆ ಗ್ರಾಮ್ ಗಳಲ್ಲಿ ಕಾಪ್ ಗಳು ವೇದಿಕೆ ಇದ್ದು ಈ ವೇದಿಕೆಗಳಲ್ಲಿ ಮೆಲು ವರ್ಗದವರು ಇದ್ದು ತಮಗೆ ಅನುಕೂಲವಾಗುವಂತೆ ತೀರ್ಮಾನ ಮಾಡುತ್ತಾರೆ ಅಂತಹ ಕಾಪ್ ಗಳನ್ನು ಕಾನೂನು ಬದ್ದವಾಗಿ ನಿಷೇದ ಮಾಡಿ ಎಂಬ ಚರ್ಚೆಗಳು ನಡೆಯುತ್ತಿವೆ.
ಹಿಂದೂ ಧರ್ಮಕ್ಕೆ ಸೇರಿರುವ ರುದ್ರಭೂಮಿಗಳಿಗೆ ದಲಿತರಿಗೆ ಶವ ಸಂಸ್ಕಾರ ಮಾಡಲು ಅವಕಾಶ ನೀಡದ ಬಗೆ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿವೆ. ಇಂತ ಸ್ಥಳದಲ್ಲಿ ಸಮಾನತೆ ನಾಗರೀಕ ಸಂಹಿತೆ ಜಾರಿಗೆ ತನ್ನಿ ಎಂಬ ಮಾತುಗಳು ಕೇಳಿ ಬರುತ್ತದೆ.
ಧಾರ್ಮಿಕ ಕಾರ್ಯಕ್ರಮಗಳ ಸಮಿತಿಗಳಲ್ಲಿ ಸಮಾನತೆ ದೊರೆಯಲು ಎಲ್ಲಾ ಜನಾಂಗವರಿಗೂ ಏಣಿ ಶ್ರೆಣಿ ಇಲ್ಲದೆ ಮಾಡಲು ಸಮಾನತೆ ನಾಗರೀಕ ಸಂಹಿತೆ ತಂದು ಹಿಂದೂ ಧರ್ಮವನ್ನು ಸುಧಾರಣೆ ಮಾಡಿ ನಂತರ ಎಲ್ಲಾ ಧರ್ಮ ರವರಿಗೆ ಏಕನಾಗರೀಕ ಸಂಹಿತೆ ತಂದರೆ ಅರ್ಥ ಇರುತ್ತದೆ. ಹಿಂದೂ ಧರ್ಮದಲ್ಲಿಯೆ ಅಸಮಾನತೆ ಇರುವಾಗ ಎಲ್ಲಾ ಧರ್ಮದವರಿಗೆ ಏಕನಾಗರೀಕ ಸಂಹಿತೆ ಹೇಗೆ ಯಶಸ್ಸು ಯಾಗಲು ಸಾದ್ಯ ಎಂಬ ಚರ್ಚೆಗೆ ಕಾರಣವಾಗುತ್ತಿದೆ.(N.S. ಈಶ್ವರಪ್ರಸಾದ್.
ನೇರಳೇಕೆರೆ. ಮಧುಗಿರಿ ತಾ”)

LEAVE A REPLY

Please enter your comment!
Please enter your name here