ಕೋಲಾರ:, ಜುಲೈ 15 :ದೇಶದ ಹಾಗೂ ರಾಜ್ಯದ ಅತ್ಯುನ್ನತ ಸೇವೆಗಳಾದ ನಾಗರಿಕ ಸೇವೆಗಳ ಹುದ್ದೆಗಳ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಿಳಿಸಿದರು. ಇಂದು ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಸೇವಾ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದರು. ಕರ್ನಾಟಕ ನಾಗರಿಕ ಸೇವೆ ಹಾಗೂ ಭಾರತೀಯ ಆಡಳಿತ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಕೋಲಾರ ಜಿಲ್ಲೆಯವರದ್ದು ಸಿಂಹಪಾಲು ಒಂದು ಕಾಲದಲ್ಲಿ ಕೆ.ಎ.ಎಸ್ ಎಂದರೆ ಕೋಲಾರ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಎಂಬುದು ಜಿಲ್ಲೆಗೆ ಅನ್ವರ್ಥನಾಮವಾಗಿತ್ತು ಹಾಗೂ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಪದವಿ ಪಡೆಯುವವರಲ್ಲಿ ಕೋಲಾರದ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರುತ್ತಿದ್ದರು ಆದರೆ ಪ್ರಸ್ತುತ ಜಿಲ್ಲೆಯ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಗಳಲ್ಲಿ ಆಸಕ್ತಿ ಕಡಿಮೆಯಾಗಿರುವುದರಿಂದ ಕೋಲಾರದಿಂದ ಆಯ್ಕೆಯಾಗುವ ಐಎಎಸ್, ಕೆಎಎಸ್ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಅವರು ಅಂತಕ ವ್ಯಕ್ತಪಡಿಸಿದರು. ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಅರ್ಥಪುರ್ಣವಾಗಿ ಆಚರಿಸಬೇಕೆಂಬ ಜಿಲ್ಲಾಡಳಿತದ ಸದುದ್ದೇಶªÀÅ ಇಂದು ಸಹಾಕಾರಗೊಂಡಿದೆ. ಈ ಬಾರಿ ಕಾರ್ಯಾಗಾರಕ್ಕೆ ಕೇವಲ ಮೂರು ದಿನಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಜಿಲ್ಲಾಡಳಿತದ ನಿರೀಕ್ಷೆ ಮೀರಿ 800 ವಿದ್ಯಾರ್ಥಿಗಳು ನೋಂದಯಿಸಿಕೊಂಡಿದ್ದಾರೆ. ಆದಾಗ್ಯೂ ಜಿಲ್ಲಾಡಳಿತವು ನೋಂದಣಿ ಮಾಡಿಕೊಳ್ಳದ ಹಾಗೂ ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಸಹ ಇಂದಿನ ಕಾರ್ಯಾಗಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಇಂತಹ ಕಾರ್ಯಾಗಾರಗಳನ್ನು ಅವಿರತವಾಗಿ ಆಯೋಜಿಸಲು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿರುವ ಅಭ್ಯರ್ಥಿಗಳ ಆಸಕ್ತಿಯೇ ಜಿಲ್ಲಾಡಳಿತಕ್ಕೆ ಪ್ರೇರೇಪಣೆ ಎಂದರು. ವೇದಿಕೆ ªೆÄೕಲಿರುವ ಗಣ್ಯಮಾನ್ಯರೆಲ್ಲರು ಕೆಲವು ವರ್ಷಗಳ ಹಿಂದೆ ನಿಮ್ಮಂತೆಯೇ ಇಂತಹ ಕಾರ್ಯಾಗಾರಗಳಲ್ಲಿ ಕುಳಿತು ಕನಸುಗಳನ್ನು ಕಂಡಿದ್ದೆವು. ಆ ಕನಸುಗಳ ಹಿಂದೆ ಬಿದ್ದು ಪರಿಶ್ರಮದ ಮೆಟ್ಟಿಲುಗಳನ್ನು ಸವೆಸಿ ಇಂದು ನಿಮ್ಮ ಮುಂದೆ ನಿರ್ದಶನಗಳಾಗಿದ್ದೇವೆ. ನಮ್ಮ ಕಾಲದಲ್ಲಿ ಈಗಿನಂತೆ ಕಂಪ್ಯುಟರ್ಗಳು, ಮೊಬೈಲ್ಗಳು ಹಾಗೂ ಅಂರ್ತಜಾಲಗಳ ಸೌಲಭ್ಯವಿರಲಿಲ್ಲ. ಕೇವಲ ಗ್ರಾಮಗಳಲ್ಲಿದ್ದ ಗ್ರಂಥಾಲಯಗಳಲ್ಲಿ ಹೆಚ್ಚಿನ ಸವÄಯ ಕಳೆದು ಅಭ್ಯಾಸ ಮಾಡುತ್ತಿದ್ದೆವು ಎಂದು ತಮ್ಮ ಬಾಲ್ಯದ ಕ್ಷಣಗಳನ್ನು ಮೆಲಕು ಹಾಕಿದರು.ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಯೇ ನಿಮ್ಮ ಬಲ. ಯಾರು ಹುಟ್ಟಿನಿಂದ ಅಧಿಕಾರಿಗಳಾಗಿ ಹುಟ್ಟುವುದಿಲ್ಲ ಅವರನ್ನು ತಯಾರು ಮಾಡಲಾಗುವುದು ಶೇ.50ಕಿಂತ ಹೆಚ್ಚು ಐಎಎಸ್, ಕೆಎಎಸ್ ಅಧಿಕಾರಿಗಳು ಗ್ರಾಮೀಣ ಭಾಗದ ಬಡಕುಟುಂಬಗಳಿಂದ ಬಂದವರಾಗಿದ್ದಾರೆ ನಾಗರಿಕ ಸೇವೆಗಳ ಗುರಿ ಸಾಧಿಸಲು ದುಬಾರಿ ಶುಲ್ಕ ಕಟ್ಟಿ ಕೋಚಿಂಗ್ ಸೆಂಟರ್ಗಳ ಸುತ್ತ ಅಲೆಯಬೇಕಿಲ್ಲ. ಸರ್ಕಾರವು ಇಂತಹ ಆಸಕ್ತ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದೆ ವಿವಿಧ ಯೋಜನೆಗಳ ಮೂಲಕ ವಿವಿಧ ಇಲಾಖೆಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಐಎಎಸ್, ಕೆಎಎಸ್ ಕೋಚಿಂಗ್ಗಳಿಗಾಗಿ ಆರ್ಥಿಕ ಸಹಾಯವನ್ನು ನೀಡುತ್ತಿವೆ ಅಂತೆಯೇ ಉಚಿತ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಬೆಂಗಳೂರು ಮತ್ತು ಕೋಲಾರದÀಲ್ಲಿ ಬಹಳಷ್ಟು ಕೋಚಿಂಗ್ ಸೆಂಟರ್ಗಳು ಲಭ್ಯವಿದೆ ವಿದ್ಯಾರ್ಥಿಗಳು ಇವೆಲ್ಲದರ ಉಪಯೋಗ ಪಡೆದುಕೊಳ್ಳಬೇಕು ಜಿಲ್ಲೆಗೆ ಕೀತಿರ್ಯನ್ನು ತರಬೇಕು ಎಂದು ತಿಳಿಸಿದರು. ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಪದ್ಮ ಬಸವಂತಪ್ಪ ರವರು ಮಾತನಾಡಿ ಕಿಕ್ಕಿರಿದು ತುಂಬಿರುವ ವಿದ್ಯಾರ್ಥಿ ಸಮೂಹವು ನಮಗೆ ಇಂತºÀ ಕಾಯಾರ್ಗಾರಗಳನ್ನು ಪದೇ ಪದೇ ಆಯೋಜಿಸಲು ಪ್ರೇರೇಪಣೆ ನೀಡುತ್ತಿದೆ ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ದೇಶದ ಮತ್ತು ರಾಜ್ಯದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು 2016ನೇ ಸಾಲಿನಲ್ಲಿ ಜಿಲ್ಲೆಯ ನಂದಿನಿ ಎಂಬ ಯುವತಿ ಐಎಎಸ್ ಶ್ರೇಣಿಯಲ್ಲಿ ದೇಶಕ್ಕೆ ಅತಿ ಹೆಚ್ಚು ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದನ್ನು ಆದರ್ಶವಾಗಿ ಇಟ್ಟಿಕೊಳ್ಳಬೇಕು ಬಹಳ ಶ್ರಮ ಪಟ್ಟು ಓದಬೇಕು ಇಂತಹ ಕಾರ್ಯಾಗಾರಗ¼ÀÄ ಮತ್ತು ತರಬೇತಿ ಕೇಂದ್ರಗಳು ಗುರಿ ¸Áಧಿಸಲು ದಾರಿದೀಪವಾಗಿರುತ್ತದೆ ಆದರೆ ಆ ದಾರಿಯಲ್ಲಿ ನಡೆದು ಗುರಿ ಸಾಧಿಸಲು ವೈಯಕ್ತಿಕ ಪರಿಶ್ರಮದಿಂದ ಮಾತ್ರ ಸಾಧ್ಯ ಅದ್ಯಯನಕ್ಕೆ ಪುರಕವಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಡಿಜಿಟಲ್ ಗ್ರಂಥಾಲಯಗಳನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ನಿಕಟಪುರ್ವ ಜಿಲ್ಲಾಧಿಕಾರಿಗಳಾದ ಎನ್.ಎಂ ನಾಗರಾಜ್ ಅವರು ಮಾತನಾಡಿ ಸಮಾಜದಲ್ಲಿ ಅರ್ಥಿಕ, ಬಡತನ ರೈತ ಕುಟುಂಬ ಮುಂತಾದವರು ಜಿಲ್ಲೆಯಲ್ಲಿ ಇದ್ದು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಸರ್ಕಾರದಲ್ಲಿ ನಾಗರಿಕ ಹುದ್ದೆಗಳಲ್ಲದೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಆ ಹುದ್ದೆಗೆ ಬೇಕಾದಂತಹ ಕೌಶಲ್ಯ ಅಥವಾ ಜ್ಞಾನದ ಕೊರತೆಯಿಂದಾಗಿ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗುತ್ತಿಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಬಡತನ, ಶ್ರೀಮಂತಿಕೆ, ಜಾತಿ, ಧರ್ಮ ಮುಖ್ಯವಲ್ಲ ಬರುವ ದಿನಪತ್ರಿಕೆಗಳು ಗ್ರಂಥಾಲಯಗಳು ಹಾಗೂ ಇಂತಹ ಕಾರ್ಯಾಗಾರಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮತ್ತು ಸತತ ಅಭ್ಯಾಸದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು, ಅಪರ ಜಿಲ್ಲಾಧಿಕಾರಿಗಳಾದ ಡಾ|| ಶಂಕರ ವಣಿಕ್ಯಾಳ್, ಸಮಾಜ ಕಲ್ಯಾಣಾಧಿಕಾರಿ ಎಂ ಶ್ರೀನಿವಾಸ್, ಜಿಲ್ಲಾ ಕೌಶಲ್ಯಭಿವೃದ್ದಿ ಅಧಿಕಾರಿ ಶ್ರೀನಿವಾಸ್, ಪದವಿ ಪುರ್ವ ಉಪ ನಿರ್ದೇಶಕರು ರಾಮಚಂದ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.