ವಿಜಯಪುರ ತಾಲೂಕಿನ ಸವನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಹಳ್ಳಿಯ ಜನರು ರೈತರ ಮಕ್ಕಳು ಸೀರೆ ಉಟ್ಟುಕೊಂಡು ಮನೆ ಮನೆಗಳಿಗೆ ಹೋಗಿ ಗುರಜಿ ಗುರುಜಿ ಎಲ್ಲ್ಯಾಡಿ ಬಂದೆ ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ ಕಾರ ಮಳೆಯೇ ಕಪ್ಪತ ಮಳೆಯೇ ಹಳ್ಳಾ ಕೊಳ್ಳಾ ತುಂಬಿಸು ಮಳೆಯೇ ಸುಣ್ಣಾ ಕೊಡತೀನಿ ಸುರಿಯಲೆ ಮಳೆಯೇ ಬಣ್ಣಾ ಕೊಡತೀನಿ ಬಾರಲೆ ಮಳೆಯೇ ಸುರಿಮಳೆಯೇ ಸುರಿಮಳೆಯೇ ಕಾರ ಮಳೆಯೇ ಕಪ್ಪತ ಮಳೆಯೇ……ಎಂಬ ಹಾಡನ್ನು ಹಾಡುವ ಮೂಲಕ ತಲೆ ಮೇಲೆ ಗುರ್ಜಿ ಹೊತು ನೀರು ಹಾಕಿಸಿಕೊಂಡು ಮೂಲಕ ಮಕ್ಕಳು ಮಳೆಗಾಗಿ ಗುರ್ಜಿ ದೇವಿಯಲ್ಲಿ ಮಕ್ಕಳ, ಮಹಿಳೆಯರು ಮತ್ತು ಪುರುಷರು ರೈತಾಪಿ ವರ್ಗದವರು ಹಾಗೂ ಶ್ರೀಮತಿ ಕಾವೇರಿ ಮಲ್ಲಿಕಾರ್ಜುನ ಹುಣಶ್ಯಾಳ ದಂಪತಿಗಳು ವರುಣ ದೇವರನ್ನು ಪ್ರಾರ್ಥಿಸಿದರು, ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘದ ಯುವಕರು ಭಾಗಿಯಾಗಿದ್ದರು.