ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್_ಡ್ಯಾಂ ನ ಹಿನ್ನಿರಿನಲ್ಲಿ ಸುಮಾರು 21 ಹಳ್ಳಿಗಳು ಮುಳುಗಿವೆ ಅದರಲ್ಲಿ ಹುನ್ನುರ ಕೂಡಾ ಒಂದು. 1977 ರಲ್ಲಿ ಲೋಕಾರ್ಪಣೆಗೊಂಡ ಡ್ಯಾಂ ನೀರಿನಲ್ಲಿ ಎಲ್ಲ ಹಳ್ಳಿಗಳು ಮುಳುಗಿದವು ಅದರಲ್ಲಿ ಯಾವ ಹಳ್ಳಿಗಳ ಅವಶೇಷಗಳು ನೋಡಲು ಸಿಗುವುದಿಲ್ಲ ಆದರೆ 1928 ರಲ್ಲಿ ನಿರ್ಮಾಣಗೊಂಡ ಹುನ್ನುರಿನ ವಿಠ್ಠಲ ದೇವಸ್ಥಾನವು ಸತತ ಹತ್ತರಿಂದ ಹನ್ನೊಂದು ತಿಂಗಳು ನೀರಿನಿಂದ ಜಲಾವೃತಗೊಂಡಿರುತ್ತದೆ. ವರ್ಷದಲ್ಲಿ ಬೇಸಿಗೆ ಸಮಯದಲ್ಲಿ ನೀರು ಕಡಿಮೆ ಆದ ನಂತರ ಈ ದೇವಸ್ಥಾನವು 15-30 ದಿನಗಳ ಕಾಲ ಮಾತ್ರ ನೋಡಲು ಸಿಗುತ್ತದೆ.ಕೆಲವೊಂದಸಾರಿ ನೀರು ಹಿಂದೆಸರಿಯದ ವರ್ಷ ಕಾಣುವುದೆ ಇಲ್ಲ. ಅದ್ಬುತ ದೇವಸ್ಥಾನವು ಸತತ ನೀರಿನಲ್ಲಿ ಇದ್ದರು ಎನು ಆಗದೆ ಗಟ್ಟಿಯಾಗಿ ನಿಂತುಕೊಂಡಿದೆ. ಡ್ಯಾಂಗೆ ಸಮೀಪ ಇರುವದರಿಂದ ನೀರಿನ ಹೋಡೆತಕ್ಕೆ ಗುಡಿಯ ಸುತ್ತ ಕಟ್ಟಿದ ಒಂದು ಭಾಗದ ಗೋಡೆ ಮಾತ್ರ ಕುಸಿದಿದೆ. ನಿನ್ನೆ ನೀರೆಲ್ಲ ಹಿಂದೆ ಹೋದ ಕಾರಣ ಇವತ್ತು ಅಲ್ಲಿ ಕುರುಬ ಸಮಾಜದವರೆಲ್ಲಾ ಸೇರಿ ದೇವಸ್ಥಾನ ಶುಚಿಗೊಳಿಸಿ ಹಬ್ಬವನ್ನೇ ಆಚರಿಸಿದರು.
ಹುನ್ನುರ ಗ್ರಾಮ ಅಲ್ಲೆ ಪಕ್ಕದ ಗುಡ್ಡದ ಮೇಲೆ ಸ್ಥಳಾಂತರವಾದ ನಂತರ ಅಲ್ಲು ಕೂಡಾ ಒಂದು ವಿಠ್ಠಲ ದೇವಸ್ಥಾನವನ್ನು ಕಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ ಹುಕ್ಕೇರಿ ತಾಲೂಕಿನಲ್ಲಿ ಯಾವುದೇ ದೇವಸ್ಥಾನವು ಕೂಡಾ ಇಷ್ಟು ಚೆಂದವಾಗಿ ನಿರ್ಮಾಣ ಮಾಡಿದ್ದು ಇಲ್ಲಾ . ಎರಡು ದೇವಸ್ಥಾನಗಳ ಪಟವನ್ನು ಹಂಚಿಕೊಂಡಿದ್ದೆನೆ ಬಿಡುವಿದ್ದರೆ ಒಮ್ಮೆ ಭೇಟಿ ಕೊಡಿ. ಮಳೆಗಾಲ ಶುರುವಾಗೋ ಮುಂಚೆ ಬಂದ್ರೆ ನೀರಲ್ಲಿ ಇರೋ ದೇವಸ್ಥಾನವು ನೋಡಲಿಕ್ಕೆ ಸಿಗುತ್ತದೆ.(ಮಾರ್ಗ- ಹಿಡಕಲ್ ಡ್ಯಾಂ ನಿಂದ ಹುನ್ನುರ ಅಥವಾ ಹತ್ತರಗಿ ಯಿಂದ ಹುನ್ನುರ ಬಂದು ತಲುಪಬಹುದು.)