ಹುಬ್ಬಳ್ಳಿ ಜು.9::ಜುಲೈ 2 ನೇ ತಾರೀಖನಂದು ಕಜಕಸ್ತಾನ ದೇಶದ ರಾಜಧಾನಿ ಆಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ದೆಯಲ್ಲಿ ಭಾಗವಹಿಸಿ 4.2 ಕಿ.ಮೀ ಇಜನ್ನು 180 ಕಿ.ಮೀ ಸೈಕ್ಲಿಂಗನ್ನು ಹಾಗೂ 42 ಕಿ.ಮೀ ಓಟವನ್ನು 13 ಗಂಟೆ 27 ನಿಮಿಷದಲ್ಲಿ ಪೂರ್ಣಗೊಳಿಸಿ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
62 ದೇಶಗಳಿಂದ 1200 ಸ್ಪರ್ದಾಳುಗಳು ಭಾಗವಹಿಸಿ ಸ್ಪರ್ದೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಬ್ಯಾಲದಿಂದಲು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಇವರು ದಿವಗಂತ ಹಣಮಂತಪ್ಪ ನಿ ಅಮರಾಪುರ ಡಿವೈಎಸ್ ಪಿ ರವರ ಪುತ್ರರಾಗಿದ್ದಾರೆ. ತಂದೆಯಂತೆ ಕುಸ್ತಿಯಲ್ಲಿ ಆಸಕ್ತಿ ಹೊಂದಿರುವ ಇವರು ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಕುಸ್ತಿ ಸ್ಪರ್ದೆಯಲ್ಲಿ ಭಾಗವಹಿಸಿದ್ದಾರೆ.
2010 ರಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಯಾಗಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಕಗದಾಳ , ಇನಾಮಹೊಂಗಲ್, ಉಗರಗೋಳ ಗ್ರಾಮ ಪಂಚಾಯತನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಾರೆ “ಗಾಂಧಿ ಗ್ರಾಮ ಪುರಸ್ಕಾರಕ್ಕೆ” ಬಾಜನರಾಗಿದ್ದಾರೆ. 2018 ರಲ್ಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ ) ಹುದ್ದೆಗೆ ಬಡ್ತಿ ಹೊಂದಿದ ಇವರು ಗ್ರಾಮೀಣ ಕೂಲಿ ಕಾರ್ಮಿಕರಿಗಾಗಿ ಸೇವೆ ಸಲ್ಲಿಸಿದ್ದಕ್ಕೆ ”ಅತ್ಯುತಮ ಸಹಾಯಕ ನಿರ್ದೇಶಕ “ ಪ್ರಶಸ್ತಿಯನ್ನು ಸ್ವಿಕರಿಸಿದ್ದಾರೆ. ಕ್ರೀಡಾ ಸ್ಪೂರ್ತಿಯನ್ನು ಗ್ರಾಮಗಳ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು ಓಟ ಮತ್ತು ಸೈಕಲ್ ಮೂಲಕ ಬೆಳಗಿನ ಹೊತ್ತಿನಲ್ಲಿ ಹಳ್ಳಿಗಳಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತಿರುವ ಯುವ ಅಧಿಕಾರಿ ಸದಾನಂದ ಹುಬ್ಬಳ್ಳಿ ತಾಲ್ಲೂಕ ಪಂಚಾಯತಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೆಲಸದ ಒತ್ತಡದ ಮದ್ಯಯು ದೇಹದ ತೂಕವನ್ನು ನಿಯಂತ್ರಿಸಿಕೊಳ್ಳಲು ಪ್ರಾರಂಭಿಸಿದ ಸೈಕ್ಲಿಂಗ್ ಇಂದು ಈ ಸಾಧನೆಯ ಮಟ್ಟಕ್ಕೆ ಬೆಳಸಿದೆ. ಬಿಡುವಿನ ಮತ್ತು ರಜಾ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡದ ಸೈಕ್ಲಿಸ್ಟಗಳೊಂದಿಗೆ ಪ್ರ್ಯಾಕ್ಟಿಸ್ ಮಾಡುತ್ತಾರೆ. ಹವ್ಯಾಸವಾಗಿ ಪ್ರಾರಂಭಗೊಂಡ ಸೈಕ್ಲಿಂಗ್ ,ಒಟ ಇಂದು ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ.
1) ಹುಬ್ಬಳ್ಳಿ ಸೈಕ್ಲಿಂಗ್ ವತಿಯಿಂದ 2017 ರಲ್ಲಿ ಆಯೋಜಿಸಿದ “ಎಮ್.ಟಿ.ಬಿ ಚಾಂಪಿಯನ್ ಶಿಪ್” ನಲ್ಲಿ 8 ನೇ ಸ್ತಾನ
2) ಗೋವಾದಲ್ಲಿ 2017 ರಅಕ್ಟೋಬರನಲ್ಲಿ ನಡೆದ “ಟಪಮ್ಯಾನ್: ಪೂರ್ಣಗೊಳಿದ್ದಾರೆ.
3) 2018 ರಲ್ಲಿ ಹುಬ್ಬಳ್ಳಿ ಪಿಟನೆಸ್ ಕ್ಲಬನಿಂದ ಆಯೋಜಿಸಿದ “ಡುವಾತ್ಲಾನ” ನಲ್ಲಿ ಪ್ರಥಮ
4) 2019 ರಲ್ಲಿ ಒಂದೇ ವರ್ಷದಲ್ಲಿ 100,200,300,400 ಮತ್ತು 600 ಕಿ.ಮೀ ಸೈಕ್ಲಿಂಗನಲ್ಲಿ ಸುಪರ್ ರಾಂಡನರ್ ಆಗಿದ್ದಾರೆ.
5) 2019 ರಲ್ಲಿಯ ಕೊಲ್ಹಾಪೂರದಲ್ಲಿ ಆಯೋಜಿಸಿದ್ದ ಸ್ಪರ್ದೆಯಲ್ಲಿ “ಲೋಹ ಪುರುಷ” ಆಗಿದ್ದಾರೆ.
6) 2020 ರ ಪೆಬ್ರುವರಿಯಲ್ಲಿ ನಾಗಪುರಲ್ಲಿ ನಡೆದ “ಟೈಗರ್ ಮ್ಯಾನ್” ಡ್ಯುವಾತ್ಲಾನ ಆಗಿದ್ದಾರೆ.
7) 2021 ರಲ್ಲಿ ಓರಿನ್ಸಾದಲ್ಲಿ ಹರ್ಕೂಲಿಯನ್ ಟೈಯೊತ್ಲಾನ ಪೂರ್ಣಗೊಳಿಸಿದ್ದಾರೆ.
8) ಅಕ್ಟೋಬರ್ 2021 ರಲ್ಲಿ “ಆಜಾದಿಕಾ ಅಮೃತ ಮಹೋತ್ಸವ”ಅಂಗವಾಗಿ ವ್ಯಸನ ಮುಕ್ತ ಭಾರತ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಯೋಜನೆಗಳ ಜಾಗೃತಿಗಾಗಿ 3800 ಕಿ.ಮೀ ಕಶ್ಮಿರದಿಂದ ಕನ್ಯಾಕುಮಾರಿವರೆಗೆ 14 ದಿನ 14 ಗಂಟೆಗಳ ಕಾಳ ಕ್ರಮಿಸಿ ಪೂರ್ಣಗೊಳಿಸಿದ್ದಾರೆ.
9) 2022 ರಲ್ಲಿ ಗೋವಾದಲ್ಲಿ ನಡೆದ ಹಾಲ್ಪ ಐರನ್ ಮ್ಯಾನ ಪೂರ್ಣಗೊಳಿಸಿದ್ದಾರೆ.
ಹವ್ಯಾಸದಿಂದ ಕನಸನ್ನು ನನಸಾಗಿಸಿಕೊಂಡ ಸದಾನಂದರವರ ಸತತ ಪರಿಶ್ರಮ ಛಲ,ತಾಳ್ಮೆ ಯುವಕರಿಗೆ ಮಾದರಿಯಾಗಿದೆ. ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಯುವ ದಿನದ ಅಂಗವಾಗಿ ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ದೇಸಿ ಕ್ರೀಡೆಗಳ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ 8 ಹೈಟೆಕ್ ಆಟದ ಮೈದಾನಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಕ್ರೀಡೋತ್ಸವಕ್ಕೆ ಸ್ಪೂರ್ತಿಯಾಗಿದ್ದಾರೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಹಾಯಕ ವ್ಯವಸ್ಥಾಪರಾಗಿರುವ ಇವರ ಧರ್ಮಪತ್ನಿ ಶ್ರೀಮತಿ ಮುಕ್ತಾ ಕೆ. ಇವರಿಗೆ ಬೆನ್ನೆಲುಬಾಗಿ ಇವರ ಸಾಧನೆಗೆ ಕಾರಣದ್ದಾರೆ. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಸಣ್ಣಮಕ್ಕಳಿಗೆ ಕ್ರೀಡಾ ಮಾರ್ಗದರ್ಶನ ಿವರು ಒಲಿಂಪಿಕ್ಸನಲ್ಲಿ ಭಾರತಿಯವರಿಗೆ ಹೆಚ್ಚಿನ ಅವಕಾಶಗಳಿವೆ. ತರಬೇತಿಯ ಅವಶ್ಯವಿದೆ ಎಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಇತ್ತಿಚೆಗೆ ಸ್ವ ಗ್ರಾಮವಾದ ಹಾವೇರಿಯ ಇಚ್ಚಂಗಿಯಲ್ಲಿ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ “ಮುಕ್ತ ಕುಸ್ತಿ” ಪಂದ್ಯಾವಳಿಯನ್ನು ಏರ್ಪಡಿಸಿ ದೇಶದ ನೂರಾರು ಜನ ಕುಸ್ತಿ ಪಟುಗಳು ಭಾಗವಹಿಸುವಂತೆ ಮಾಡಿ ತಮ್ಮ ಕ್ರೀಡಾಸಕ್ತಿಯನ್ನು ಮರೆದಿದ್ದಾರೆ.

ಶ್ರೀ ಗುರುದತ್ತ ಹೆಗಡೆ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸದಾನಂದ ಅಮರಾಪುರ ಇವರ ಸಾಧನೆ ಅಮೋಘವಾದದ್ದು ಧಾರವಾಡ ಜಿಲ್ಲಾಡಳಿತದ ಪರವಾಗಿಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಶ್ರೀ ಮತಿ .ಸ್ವರೂಪ TK , ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಅಮರಾ ಪುರ್ ಅವರು ಕ್ರೀಡೆಯಲ್ಲಿ ಆಸಕ್ತಿ ಉಳ್ಳವರು ಆಗಿದ್ದು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಈ ಸಾಧನೆ ಇಂದ ಜಿಲ್ಲೆಗೆ ಹೆಮ್ಮೆ ಯಾಗದೆ ಜಿಲ್ಲಾ ಪಂಚಾಯತ್ ಪರವಾಗಿ ಹೃತಪೂರ್ವಕವಾಗಿ ಅಭಿನಂದನೆಗಳು .

ಶ್ರೀ ಗಂಗಾಧರ ಕಂದಕೂರ, ಕಾರ್ಯನಿರ್ವಾಹಕ ಅಧಕಾರಿಗಳಿಗೆಅಧಕಾರಿ .’ ಸದಾನಂದ ಅಮರಾಪುರ್ ಅವರು ಕಛೇರಿ ಕೆಲಸದ ಜೊತೆಯಲ್ಲಿ ಈ ಸಾಧನೆ ಮಾಡಿರುವುದು ನಮಗೆ ಮತ್ತು ಹುಬ್ಬಳ್ಳಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಅವರಿಗೆ ತಾಲೂಕಿನ ವತಿಯಿಂದ ಹೃತ್ಪೂ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಶ್ರೀ ಸದಾನಂದ ಅಮರಾಪೂರ ”ಗ್ರಾಮೀಣಾಭಿವೃದ್ದಿ ಇಲಾಖೆಯ ಉನ್ನತ ಅಧಿಕಾರಿಗಳಿಂದ ಶ್ರೀ ಎಲ್.ಕೆ ಅತೀಕ ಸರ್ ಕುಟುಂಬ ವರ್ಗ ,ಸ್ನೇಹಿತರ ಬೆಂಬಲ ಸಹಕಾರ ಮತ್ತು ಸತತ ಕಠಿಣ ಪರಿಶ್ರಮ ತಾಳ್ಮೆಯಿಂದ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಯಿತ್ತು.

LEAVE A REPLY

Please enter your comment!
Please enter your name here