ಮೂಡಲಗಿ:ಜು,08-ತಾಲೂಕಿನ ಶಿವಾಪೂರ(ಹ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಶಂಕರಗೌಡ ದುಂಡಪ್ಪಗೌಡ ಪಾಟೀಲ,ಉಪಾಧ್ಯಕ್ಷರಾಗಿ ಈಶ್ವರ ಶಿವಲಿಂಗಪ್ಪ ಗೊರಗುದ್ದಿ, ಅವರು ಮುಖಂಡರ ನೇತೃತ್ವ ಹಾಗೂ ಸದಸ್ಯರ ಸಹಮತದೊಂದಿಗೆ ಆಯ್ಕೆಯಾದರು.ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಎಲ್ಲ ಸದಸ್ಯರಿಗೂ ಸಿಹಿ ತಿನ್ನಿಸಿ ಸನ್ಮಾನಿಸಿದರು, ಚುನಾವಣಾಧಿಕಾರಿಗಳಾದ ಬಿ.ಕೆ. ಗೋಖಲೆ ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರಿಗೂ ಪ್ರಮಾಣ ಪತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ. ಎಸ್. ಪಾಟೀಲ,ಐ. ಬಿ. ಬೆಳಗಲಿ, ಪಿ. ಎಸ್. ಪಾಟೀಲ, ಕೆ.ಬಿ.ಮುಧೋಳ,ಎಸ್. ವಾಯ್. ಜುಂಜರವಾಡ, ಸಿ. ಎಂ. ಬೆಳಗಲಿ, ಕೆ. ಜಿ. ಮುಧೋಳ,ಬಿ. ಎಸ್. ಪಾಟೀಲ,ಎಸ್. ಬಿ. ರಡ್ಡೇರಟ್ಟಿ, ಎಂ.ಎಂ.ಜುಂಜರವಾಡ ಸೇರಿದಂತೆ ಗ್ರಾಮದ ಎಲ್ಲ ಮುಖಂಡರು ಪಂಚಾಯತಿಯ ಸದಸ್ಯರು, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಮಾದೇವ ಬೆಳಗಲಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.