ಸಮಾಜದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು1 ಬಾಲಯೋಗಿ ಪುನ್ಯಕೋಟಿ ಮಠದ ಶ್ರೀ ಜಗದೀಶ್ವರ ಅಪ್ಪಾಜಿ ಸ್ವಾಮಿ ಗಳು ಸ್ವಾಮಿಜಿ ಹೇಳಿದರು. ತಪೋವನ ಸಮೂಹ ಸಂಸ್ಥೆಯ ಛೇರ್ಮನ್ ಡಾ. ಶಶಿಕುಮಾರ್ ವಿ. ಮೆಹರ್ವಾಡೆ ಇವರ ಜನ್ಮದಿನೋತ್ಸವದ ಅಂಗವಾಗಿ ತೆಪೋವನ ಸಮೂಹ ಸಂಸ್ಥೆಗಳು ಹಾಗೂ ಶಶಿಕುಮಾರ್ ಅವರ ಅಭಿಮಾನ ವರ್ಗದವರು ಗುರುವಾರಹರಿಹರದಲ್ಲಿ .ಶ್ರೀ ಶಕ್ತಿ ಹಿರಿಯ ನಾಗರೀಕರ ವಸತಿ ನಿಲಯದಲ್ಲಿ ಹಮ್ಮಿಕೊಂಡ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಆರ್ಶಿವದಿಸಿಮಾತನಾಡಿದ ಅವರು ಪ್ರಯತ್ನಕ್ಕೆ, ಸಾಧಕರಿಗೆ ಯಾವುದೇ ಅಡ್ಡಿ ಬಾರದು ಎಂಬುದಕ್ಕೆ ಶಶಿಕುಮಾರ್ ವಿ. ಮೆಹರ್ವಾಡೆ ಅವರು ತಪೋವನ ಸಂಸ್ಥೆ ಕಟ್ಟಿ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ ಹೆಸರಾಂತ ಸಂಸ್ಥೆಯಾಗಿ ತಪೋವನ ಬೆಳೆದಿದ್ದು, ಇದು ನಮಗೂ ಹೆಮ್ಮೆ ಅನಿಸಿದೆ. ಈ ಸಂಸ್ಥೆಯ ಮುಖಾಂತರ ಸಾವಿರಾರು ವಿದ್ಯಾರ್ಥಿಗಳು. ಸಾವಿರಾರು ಜನ ತೆಪೋವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಗುಣಮುಖರಾಗಿದ್ದಾರೆ.ಅಲ್ಲದೆ ಇವರ ಸಂಸ್ಥೆಯ ಮುಖಾಂತರ ರಾಜ್ಯದಂತಾ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಮಾಡುತ್ತಿರುವುದು ಸಮಾಜಮುಖಿ ಕಾರ್ಯವಾಗಿದೆ ಹೀಗೆ ಅನೇಕ ಸಮಾಜಸೇವೆ ಹಾಗೂ ನೊಂದವರಿಗೆ ಸದಾ ಸಹಾಯಹಸ್ತಮಾಡುವಲ್ಲಿ ಶಶಿಕುಮಾರ ತಮ್ಮ ದುಡಿಮೆಯ ಅಲ್ಪಬಾಗ ಸಮಾಜಸೇವೆಗೆ ನೀಡುತ್ತಿರುವುದು ಅವರ ಸರಳಸಜ್ಜನಿಕೆಯ ಮೇರು ವ್ಯಕ್ತಿತ್ವ ಅವರಲ್ಲಿ ಕಾಣಬಹುದಾಗಿದೆ ಭಗವಂತಅವರಿಗೆ ನೂರ್ಕಾಲ ಆಯುರಾರೋಗ್ಯ ಕರುಣಿಸಲಿ ಅವರ ಸಮಾಜ ಮುಖಿಕಾರ್ಯಕ್ಕೆ ಸದಾ ನಮ್ಮ ಬೆಂಬಲವಿದೆ ಎಂದರು. ಹಿಂದು ರಾಷ್ಟ್ರ ಸೇನೆ ರಾಜ್ಯ ಅಧ್ಯಕ್ಷ ಶ್ರೀ ಸಂದೀಪ ಮಹಾರಾಜ್ ಇವರು ಸಮಾರಂಭದ ದಿವ್ಯಸಾನಿದ್ಯ ವಹಿಸಿ.ಮಾತನಾಡಿ.ಶಶಿಕು ಮಾರ್ ಅವರಿಗೆ ಭಗವಂತ ದೀರ್ಘಾಯುಷ್ಯ ನೀಡಿ ಅರಿಗೆ ಇನ್ನೂ ಹೆಚ್ಚಿನದಾಗಿ ಸಾಮಾಜಿಕ ಕಾರ್ಯಮಾಡುವಂತ ಶಕ್ತಿ ನೀಡಲಿ ಎಂದರು ಹರಿಹರ ಶಾಸಕರಾದ ಬಿ.ಪಿ.ಹರೀಶ್ ಅವರು ಶಶಿಕುಮಾರ್‌ಅವರಿಗೆ ಶುಭಾಶಯಕೋರಿ ಮಾತನಾಡಿದಶಶಿಕುಮಾರ್ ರವರಂತ ಸಮಾಜಮುಖಿ ಕೆಲಸ ಕರ್ಯಮಾಡುವಂತವರು ಪ್ರಸ್ತುತವಾಗಿ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದ್ದಾರೆ.ಅವರಿಗೆ ದೇವರು ಇನಷ್ಟು ಸಮಾಜ ಸೇವೆಮಾಡುವ ಶಕ್ತಿ ನೀಡಲಿ ಎಂದರು. ತಪೋವನ ಸಮೂಹ ಸಂಸ್ಥೆಯ ಛೇರ್ಮನ್ ಡಾ. ಶಶಿಕುಮಾರ್ ವಿ. ಮೆಹರ್ವಾಡೆ . ಇವರು ಮಾತನಾಡಿ. ನನಗೆ ಗುರು ಹಿರಿಯರು ಸರ್ವ ನನ್ನ ಹಿತಬಯಸುವ ಅಭಿಮಾನಿವರ್ಗಕ್ಕೆ ಸದಾಚಿರ ಋಣಿಯಾಗಿದ್ದೇನೆ ನಿಮ್ಮೇಲ್ಲರ ಆರ್ಶಿವಾದ ಸದಾ ಇದೆ ರೀತಿ ನಮ್ಮ ಸಂಸ್ಥೆ ಮೇಲೆ ಇರಲಿ ಎಂದರು. ತಪೋವನ ಸಮೂಹ ಸಂಸ್ಥೆಯವರು.ಜನ್ಮದಿನೋತ್ಸವದ ಅಂಗವಾಗಿ.ಸಸಿನಡೆವುದರ ಮುಂಖಾತರ ಗೋಮಾತೆಗೆ ಪೋಜೆಪುನಸ್ಕಾರಗಳೋಂದಿಗೆಜನ್ಮದಿನೋತ್ಸವದ ಆಚರಿಸಿದರು.ಸಮಾರಂಭದಲ್ಲಿ.ಹಿರಿಯ ನಾಗರೀಕರು.ಮುಖಂಡರು. ಸಂಸ್ಥೆಯ ಪ್ರಾಚಾರ್ಯರುಗಳು, ಬೋದಕರು, ಪದಾಧಿಕಾರಿಗಳು, ನೌಕರರು ಹಾಗೂ ಕಾಲೇಜಿನ ವಿದ್ಯಾರ್ಥಿಗಳಷ್ಟೇ ಅಲ್ಲದೇ ಅಭಿಮಾನಿಗಳು ಭಾಗವಹಿಸಿದ್ದರು.