ಮೂಡಲಗಿ:ಜು,06- ತಾಲೂಕಿನ ನಾಗನೂರ ಪಟ್ಟಣದ 2000 ರಿಂದ 07ರ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿ/ನಿಯರು "ಗುರು ವಂದನಾ" ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗುರುವಿಗೆ ಕೃತಜ್ಞತೆ ಸಲ್ಲಿಸಲು ಗೆಳೆಯ- ಗೆಳತಿಯರು 'ಸ್ನೇಹ ಸಮ್ಮಿಲ್ಲನ'ಎಂಬ ಶೀರ್ಷಕೆ ಇಟ್ಟುಕೊಂಡು,ಪರಸ್ಪರ ಎಲ್ಲರೂ ಕುಶಲೋಪ ಬೇಟಿ/ಮರೆತ ಹೊದ ಶಾಲಾ ದಿನಗಳ ಕ್ಷಣಗಳನ್ನು ಮತ್ತೆ ನೆನಪಿಗೆ ಬಂದಕ್ಷಣ ಸಂತೋಷ ಹಂಚ್ಚಿಕೊಳ್ಳುವುದೆ "ಸ್ನೇಹ ಸಮ್ಮಿಲನ" (ಸಂಗಮ).ಎಲ್ಲ ವಿದ್ಯಾರ್ಥಿ/ನಿಯರ ಮುಖದಲ್ಲಿ ಹಳೆಯ ನೆನಪು ಮರುಕಳಿಸಿದ ಒಳ್ಳೆಯ ಘಳಿಗೆ ಇದಾಗಿತ್ತು.ಹಚ್ಚು ಹಸಿರಿನ ಹಾಗೆ ಕಂಗೊಳಿಸಿರುವ ವಿದ್ಯಾರ್ಥಿ/ನಿಯರ ತಮ್ನ ಸಂಸಾರದ ಜಂಜಾಟವನ್ನು ಕ್ಷಣಕಾಲ ಮರೆತು ನಗುವಿನ ಮಡಿಲಿನಲ್ಲಿ ತೆಲುತಾ ಉಲ್ಲಾಸದಿಂದ ಅಂದ-ಚಂದದಿಂದ ಕಾರ್ಯಕ್ರಮ ನಡೆಯಿತು. ಹಿಂತ ಶಿಷ್ಯ ವೃಂದ ಪಡೆದ ನಾವೇ ಧನ್ಯರು ಎಂದರು ಗುರುಗಳು.ಗುರುಗಳು,ವಿದ್ಯಾರ್ಥಿ/ನಿಯರು ಮತ್ತು ಪಾಲಕರು ಉಪಸ್ಥಿತರಿದ್ದರು.